ಕೃಷಿಯತ್ತ ಮುಖ ಮಾಡಿದ ಹಿರಿಯ ನಟಿ ಶ್ರುತಿ

Public TV
1 Min Read

ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶ್ರುತಿ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹೊಲಕ್ಕಿಳಿದು ಉಳುಮೆ ಮಾಡಲು ಆರಂಭಿಸಿದ್ದಾರೆ. ತಾನು ಕೃಷಿ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಹಿರಿಯ ನಟಿ ಶ್ರುತಿ, ಈಗ ಸಿನಿಮಾ ಮತ್ತು ರಿಯಾಲಿಟಿ ಶೋ ಎರಡರಲ್ಲೂ ಸಖತ್ ಬ್ಯುಸಿಯಿದ್ದಾರೆ. ಆದರೆ ಈ ನಡುವೆ ಕೃಷಿ ಕೆಲಸ ಮಾಡಲು ಮನಸ್ಸು ಮಾಡಿದ್ದಾರೆ. ಹೊಲಕ್ಕಿಳಿದು ಉಳುಮೆ ಮಾಡಲು ಆರಂಭಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.  ಇದನ್ನೂ ಓದಿ: ನಯನತಾರಾಗೆ ಲೋಕಲ್ ಫುಡ್ ತಿನ್ನಿಸಿದ ಭಾವಿಪತಿ ವಿಘ್ನೇಶ್

 

View this post on Instagram

 

A post shared by Shruthi (@shruthi__krishnaa)

ಸಿನಿಮಾಗಳಿಂದ ಬ್ರೇಕ್ ಪಡೆದು ತಮ್ಮ ಹೊಲದಲ್ಲಿ ಕೃಷಿ ಕೆಲಸ ಮಾಡಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡುತ್ತಿರುವ ಶ್ರುತಿಗೆ ಮಗಳು ಗೌರಿ ಮತ್ತು ತಾಯಂದಿರು ಕೂಡ ಸಾಥ್ ನೀಡಿದ್ದಾರೆ. ನಾನೇ ಉತ್ತಿ ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹುವರ್ಷದ ಆಸೆ. ಭಗವಂತನಿಗೆ ಕೋಟಿ ನಮನಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಟಿ ಶ್ರುತಿ ವಿಡಿಯೋ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article