Don 3: ಕಿಯಾರಾ ಬದಲು ರಣವೀರ್ ಸಿಂಗ್‌ಗೆ ನಾಯಕಿಯಾಗಲಿದ್ದಾರೆ ಶಾರ್ವರಿ

By
1 Min Read

ಣವೀರ್ ಸಿಂಗ್ (Ranveer Singh) ನಟನೆಯ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರಕ್ಕೆ ಕಿಯಾರಾ ಅಡ್ವಾಣಿ (Kiara Advani) ಬದಲು ಶಾರ್ವರಿ ವಾಘ್ ನಾಯಕಿಯಾಗಿದ್ದಾರೆ. ರಣವೀರ್ ಜೊತೆ ಶಾರ್ವರಿ (Sharvari) ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್‌ ಅಭಿನಯದ ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೂಟಿಂಗ್‌ ಶುರು – BRB ಫಸ್ಟ್‌ ಲುಕ್‌ ರಿವೀಲ್‌

‘ಡಾನ್ 3’ಗೆ ಈ ಮೊದಲು ಕಿಯಾರಾ ನಾಯಕಿಯಾಗಿದ್ದರು. ಆದರೆ ಅವರು ಪ್ರೆಗ್ನೆಂಟ್ ಆಗಿರೋದ್ರಿಂದ ಈ ಚಿತ್ರವನ್ನು ಕೈಬಿಟ್ಟಿದ್ದರು. ಈ ಹಿನ್ನೆಲೆ ಕಿಯಾರಾ ಜಾಗಕ್ಕೆ ಶಾರ್ವರಿ ವಾಘ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ರೋಲ್‌ನಲ್ಲಿ ಅವರು ನಟಿಸಲಿದ್ದಾರೆ. ಇದನ್ನೂ ಓದಿ:ಮುಂಬೈ ಬಳಿ 9.85 ಕೋಟಿಗೆ ಭೂಮಿ ಖರೀದಿಸಿದ ಅಳಿಯ ಕೆಎಲ್‌ ರಾಹುಲ್‌, ಮಾವ ಸುನೀಲ್‌ ಶೆಟ್ಟಿ

ಆಲಿಯಾ ಭಟ್ (Alia Bhatt) ಜೊತೆ ಶಾರ್ವರಿ ನಟಿಸಿರುವ ‘ಆಲ್ಫಾ’ ಸಿನಿಮಾ ಡಿ.25ರಂದು ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಕೆಲಸದಲ್ಲಿ ಶಾರ್ವರಿ ಬ್ಯುಸಿಯಾಗಿದ್ದಾರೆ. ‘ಆಲ್ಫಾ’ ಚಿತ್ರದ ಜೊತೆ ‘ಡಾನ್ 3’ ಕೂಡ ಮಾಡಲಿದ್ದಾರೆ.

Share This Article