2 ವರ್ಷಗಳ ನಂತರ ಕಿರುತೆರೆಗೆ ಮರಳಿದ ಶಾಂಭವಿ ವೆಂಕಟೇಶ್

By
1 Min Read

ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್‌ನಲ್ಲಿ ರಂಜಿಸಿದ್ದ ನಟಿ ಶಾಂಭವಿ ವೆಂಕಟೇಶ್ (Shambhavi Venkatesh) ಅವರು ಕಡೆಯದಾಗಿ ಪಾರು (Paaru) ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ನಟಿ ಶಾಂಭವಿ ಗರ್ಭಿಣಿಯಾಗಿದ್ದ ಕಾರಣ ನಟನೆಗೆ ವಿದಾಯ ಹೇಳಿದ್ದರು. 2021ರ ಜೂನ್ ತಿಂಗಳಿನಲ್ಲಿ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ ಶಾಂಭವಿ ಮತ್ತೆ ಟಿವಿ ಪರದೆಯತ್ತ ಮುಖ ಮಾಡಿದ್ದಾರೆ.

ಅವಳಿ ಮಕ್ಕಳ ಪಾಲನೆಗಾಗಿ ನಟನೆಯಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದ ಶಾಂಭವಿ ವೆಂಕಟೇಶ್ (Shambhavi Venkatesh) ಮತ್ತೊಮ್ಮೆ ಸಿಹಿ ಸುದ್ದಿ ಕೊಟ್ಟಿದ್ದಾಗಿದೆ. ಎರಡು ವರ್ಷಗಳ ಗ್ಯಾಪ್‌ನ ನಂತರ ಮತ್ತೆ ನಟನೆಯತ್ತ ಶಾಂಭವಿ ಮುಖ ಮಾಡಿದ್ದಾರೆ. ಹೊಚ್ಚ ಹೊಸ ಧಾರಾವಾಹಿ ‘ಅಮೃತಧಾರೆ’ಯಲ್ಲಿ (Amruthadaare) ನಾಯಕ ಗೌತಮ್ ದಿವಾನ್ ಮಾಜಿ ಪ್ರೇಯಸಿ ಮಾನ್ಯ ಆಗಿ ನಟಿಸುವ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ.

ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಶಾಂಭವಿ ಮೊದಲ ದಿನದ ಶೂಟಿಂಗ್‌ನ ಫೋಟೋವೊಂದನ್ನು ಹಂಚಿಕೊಂಡಿದ್ದು ಐ ಆ್ಯಮ್ ಬ್ಯಾಕ್, ಚೀಯರ್ಸ್ ಟು ದಿ ನ್ಯೂ ಬಿಗಿನಿಂಗ್ ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ನಟಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಬರೋಬ್ಬರಿ 20 ವರ್ಷಗಳ ಬಳಿಕ ದಳಪತಿ ವಿಜಯ್ ಜೊತೆ ಜ್ಯೋತಿಕಾ ನಟನೆ

ಅಮೃತಧಾರೆ ನಾಯಕ ಗೌತಮ್ ದಿವಾನ್, ಮಾಜಿ ಪ್ರೇಯಸಿ ಆಗಿದ್ದ ಮಾನ್ಯ ಸದ್ಯ ಅವನಿಂದ ದೂರವಾಗಿದ್ದರು. ಇಷ್ಟು ದಿನಗಳ ಕಾಲ ಸುಳಿವೇ ಇಲ್ಲದಂತಿದ್ದ ಆಕೆ ಇದೀಗ ಗೌತಮ್ ಮದುವೆ ನಿಶ್ಚಯವಾದ ಬಳಿಕ ಆತನನ್ನು ಭೇಟಿಯಾಗಬೇಕು. ಅವನೊಂದಿಗೆ ಮಾತನಾಡಬೇಕು ಎಂದು ಯಾಕೆ ಬಯಸುತ್ತಿದ್ದಾರೆ ಎಂಬುದಕ್ಕೆ ಮುಂದಿನ ಎಪಿಸೋಡ್ ಮೂಲಕ ಉತ್ತರ ಸಿಗಬೇಕಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್