ತಪ್ಪಿದ ಭಾರಿ ಅನಾಹುತ: ಆಯತಪ್ಪಿ ಬಿದ್ದ ನಟಿ

Public TV
1 Min Read

ಸಿಂಪಲ್ ಸುನಿ (Simple Suni) ನಿರ್ದೇಶನದ ಹೊಸ ಸಿನಿಮಾದ ಶೂಟಿಂಗ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ಹಾಡಿನ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ ನಿರ್ದೇಶಕರು ಈ ಸಮಯದಲ್ಲಿ ಅವಘಡವೊಂದು ಸಂಭವಿಸಿದೆ. ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಾಯಕಿ ಸಾತ್ವಿಕ್ (Sathvika) ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೆಲವು ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾ ಶೂಟಿಂಗ್ ವೇಳೆ ಈ ದುರಂತ ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಹೊಸ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಸಾಂಗ್ ಶೂಟಿಂಗ್ ವೇಳೆ ಹಗ್ಗದ ಮೇಲೆ ನೇತಾಡುತ್ತಿದ್ದ ನಟಿ ಸಾತ್ವಿಕಾ ಮೇಲಿಂದ ಆಯಾ ತಪ್ಪಿ ಬಿದ್ದಿದ್ದಾರೆ. ಕೆಳಗೆ ಬೆಡ್ ಹಾಕಿದ್ದರಿಂದ ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಉದಯಪುರ ಫೈಲ್ಸ್ ಭಾರೀ ವಿವಾದ: 150 ಕಡೆ ಕತ್ತರಿ

ನಟಿ ಸಾತ್ವಿಕ ನಿರ್ದೇಶಕ ಓಂ ಪ್ರಕಾಶ್ ರಾವ್ ಪುತ್ರಿ. ಶ್ರಾವ್ಯ ಅಂತಿದ್ದ ಹೆಸರನ್ನು ಅವರು ಸಾತ್ವಿಕಾ ಅಂತ ಬದಲಾಯಿಸಿಕೊಂಡಿದ್ದಾರೆ. ಅವರೇ ರೋಪ್ ಕಟ್ಟಿ ಶೂಟಿಂಗ್ ಮಾಡುವ ವೇಳೆ ನಡೆದಿರುವ ಘಟನೆಯಲ್ಲಿ ಆಯಾ ತಪ್ಪಿ ಬಿದ್ದವರು. ಅದೃಷ್ಟವಶಾತ್ ಏನು ಪೆಟ್ಟಾಗದೆ ಬಚಾವ್ ಆಗಿದ್ದಾರೆ ಸಾತ್ವಿಕಾ.

Share This Article