ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಾರಾ ಅಲಿ ಖಾನ್ ವಿರುದ್ಧ ಕಿಡಿಕಾರಿದ ನೆಟ್ಟಿಗರು

Public TV
2 Min Read

ಬಾಲಿವುಡ್ (Bollywood) ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಸಾರಾ ಅಲಿ ಖಾನ್ (Sara Ali Khan) ಅವರು ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ವಿಕ್ಕಿ ಕೌಶಲ್, ಸಾರಾ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ರಿಲೀಸ್ ಬೆನ್ನಲ್ಲೇ ನಟಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸೈಫ್ ಪುತ್ರಿ ಸಾರಾ ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಸುದ್ದಿ ಆಗುತ್ತಾರೆ. ಕೆಲವೇ ದಿನಗಳ ಹಿಂದೆ ಅವರು ಕೇದಾರನಾಥಕ್ಕೆ ಹೋಗಿದ್ದರು. ಈಗ ಅವರು ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ (Mahakaleshwara Temple) ಭೇಟಿ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಕಾಣಿಸಿಕೊಂಡ ಅವರು ಅಲ್ಲಿನ ಪುರೋಹಿತರ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸಾರಾ, ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿರೋದ್ದಕ್ಕೆ ಕೆಲವರು ತಕರಾರು ತೆಗೆದಿದ್ದಾರೆ. ಇದೆಲ್ಲ ಪ್ರಚಾರದ ಗಿಮಿಕ್ ಎಂದು ವ್ಯಂಗ್ಯವಾಡಿದ್ದಾರೆ. ಸಾರಾ ಅಲಿ ಖಾನ್ ಹಿಂದೂ ಧರ್ಮಕ್ಕೆ ಬಂದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಸಾರಾ, ವಿಕ್ಕಿ ಕೌಶಲ್ ನಟನೆಯ ‘ಝರಾ ಹಟ್ಕೆ ಝರಾ ಬಚ್ಕೆ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಸಾರಾ- ವಿಕ್ಕಿ ಕೌಶಲ್ ಅವರು ಜೋಡಿಯಾಗಿ ನಟಿಸಿದ್ದಾರೆ. ಜೂನ್ 2ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಇದನ್ನೂ ಓದಿ:ಸಮಂತಾ ನಟನೆಯ ಹಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

ಇತ್ತೀಚೆಗೆ ಸಾರಾ ಅಲಿ ಖಾನ್ ಅವರು ಕಾನ್ ಚಿತ್ರೋತ್ಸವಕ್ಕೆ (Cannes Festival) ಹಾಜರಿ ಹಾಕಿದ್ದರು. ಅಲ್ಲಿ ಅವರು ಟಸ್ಸೆಲ್ ಗೌನ್ ತೊಟ್ಟು ಮಿರಿ-ಮಿರಿ ಮಿಂಚಿದ್ದರು. ಟಸ್ಸೆಲ್ ಗೌನ್ ಪುರಾತನ ಈಜಿಪ್ಟ್ ಕಾಲದ ಉಡುಗೆಯಾಗಿದೆ. ನಟಿ ಸಾರಾ ಅವರು ಕಾನ್ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಭಾಗಿಯಾಗಿದ್ದು, ಅಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.

Share This Article