ನಡೆದುಕೊಂಡೇ ಅಮರನಾಥ ಯಾತ್ರೆ ಮಾಡಿದ ನಟಿ ಸಾರಾ ಅಲಿ ಖಾನ್

Public TV
1 Min Read

ಹಿಂದೂ ದೇವಸ್ಥಾನಗಳಿಗೆ ಹೋಗಿದ್ದಕ್ಕಾಗಿ ಹಲವಾರು ಬಾರಿ ಟೀಕೆ ಎದುರಿಸಿರುವ ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಮತ್ತೆ ಅಮರನಾಥ ಯಾತ್ರೆ ಕೈಗೊಂಡಿದ್ದರು. ಭಾರೀ ಭದ್ರತೆಯ ಮಧ್ಯೆ ನಟಿ ಅಮರನಾಥ ದರ್ಶನ ಮಾಡಿದ್ದಾರೆ. ಭದ್ರತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ನಟಿಯ ವಿಡಿಯೋ ವೈರಲ್ ಆಗಿದೆ.

ಯಾರು ಏನೇ ಟೀಕೆ ಮಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆಗಲೇ ಖಡಕ್ ಆಗಿರುವಂಥ ಸಂದೇಶವನ್ನು ಸಾರಾ ದಾಟಿಸಿಯಾಗಿದೆ. ಯಾರೇ ಬೆದರಿಕೆ ಹಾಕಿದರೂ, ನನ್ನಿಷ್ಟದ ದೇವಸ್ಥಾನಕ್ಕೆ ಹೋಗುವ ಹಕ್ಕು ನನಗಿದೆ ಎಂದು ಹೇಳಿದ್ದಾರೆ. ಹಾಗಾಗಿ ದೇಶದ ವಿವಿಧ ದೇವಸ್ಥಾನಗಳಿಗೆ ಸಾರಾ ಭೇಟಿ ಮಾಡುತ್ತಲೇ ಇರುತ್ತಾರೆ.  ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ

ಇತ್ತೀಚೆಗಷ್ಟೇ ಸಾರಾ ನಟನೆಯ ‘ಝರಾ ಹಟ್ಕೆ ಝರಾ ಬಜ್ಕೆ’ ಸಿನಿಮಾ ರಿಲೀಸ್ ಆಗಿದೆ. ಬಾಕ್ಸ್ ಆಫೀಸ್ ಗಳಿಕೆ ಕೂಡ ಚೆನ್ನಾಗಿದೆ. ಹಾಗಾಗಿ ಸಾರಾ ಜಮ್ಮು ಕಾಶ್ಮೀರಕ್ಕೆ (Jammu and Kashmir) ಭೇಟಿ ನೀಡಿ, ಅಮರನಾಥ ಯಾತ್ರೆ (Amarnath Yatra) ಪೂರೈಸಿದ್ದಾರೆ. ಸಾರಾ ಕಂಡ ಅಭಿಮಾನಿಗಳು ನಟಿ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಕೆಲವರು ಅವರ ವಿಡಿಯೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

 

ಇತ್ತೀಚೆಗಷ್ಟೇ ದಕ್ಷಿಣದ ತಾರೆ ಸಾಯಿ ಪಲ್ಲವಿ ಕೂಡ ಅಮರನಾಥ ಯಾತ್ರೆ ಮಾಡಿದ್ದರು. ತಂದೆ ತಾಯಿಗೆ ದೇವರ ದರ್ಶನ ಮಾಡಿಸಬೇಕು ಎನ್ನುವುದು ಅವರ ಕನಸಾಗಿತ್ತಂತೆ. ಹಾಗಾಗಿ ಅಪ್ಪ ಅಮ್ಮನೊಂದಿಗೆ ಸಾಯಿ ಪಲ್ಲವಿ ಅಮರನಾಥ ಯಾತ್ರೆ ಮಾಡಿದ್ದರು. ಆ ದಿವ್ಯ ದರ್ಶನದ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್