ಕಿರುತೆರೆಗೆ ಎಂಟ್ರಿ ಕೊಟ್ಟ ‘ಕಾಂತಾರ’ ಬೆಡಗಿ ಸಪ್ತಮಿ

Public TV
1 Min Read

‘ಕಾಂತಾರ’ (Kantara) ಬ್ಯೂಟಿ ಸಪ್ತಮಿ ಗೌಡ (Sapthami Gowda) ಅವರು ಟಿವಿ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಪ್ತಮಿ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಸಿನಿಮಾ ಬಿಟ್ಟು ಸೀರಿಯಲ್‌ಗೆ ಎಂಟ್ರಿ ಕೊಟ್ರಾ? ಅಂತ ನೀವು ಅಂದುಕೊಂಡಿರಬಹುದು. ಆದರೆ ಅಸಲಿ ವಿಚಾರ ಬೇರೆ ಇದೆ.

ರಿಷಬ್ ಶೆಟ್ಟಿ (Rishab Shetty) ಅವರಿಗೆ ನಾಯಕಿಯಾಗಿ ‘ಕಾಂತಾರ’ ಮೂಲಕ ಸಕ್ಸಸ್ ಕಂಡ ನಟಿ ಸಪ್ತಮಿ ಇದೀಗ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ಕಿರುತೆರೆಗೆ ಸಪ್ತಮಿ ಹಾಜರಿ ಹಾಕಿದ್ದಾರೆ. ‘ಶ್ರೀರಸ್ತು ಶುಭಮಸ್ತು’ ಸೀರಿಯಲ್ ಇದೀಗ ಮಹಾ ಸಂಚಿಕೆ ನಡೆಯುತ್ತಿದೆ. ಇದರಲ್ಲಿ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಸಪ್ತಮಿ ತಂಡಕ್ಕೆ ಸಾಥ್ ನೀಡಿದ್ದಾರೆ.

ಸೀರಿಯಲ್ ಪ್ರಚಾರಕ್ಕೆ ಸಪ್ತಮಿ ಬಂದಿದ್ದಾರೆ. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಪಾತ್ರಗಳ ನಿರೂಪಣೆ ಮಾಡಿದ್ದಾರೆ. ಸೀರಿಯಲ್‌ನ ನಾಯಕಿ ತುಳಸಿ ಪಾತ್ರಧಾರಿ ಅಂದರೆ ಸುಧಾರಾಣಿ ಅವರು ಮಕ್ಕಳ ಖುಷಿಗಾಗಿ ಎದುರಾಳಿಗಳ ಕುತಂತ್ರಕ್ಕೆ ಮಣಿದು ಮನೆಯಿಂದ ಹೊರಹೋಗುತ್ತಾರೆ. ಮುಂದೇನು ಆಗುತ್ತೆ? ನಾಯಕಿ ಮತ್ತೆ ಮರಳಿ ಮನೆಗೆ ಬರುತ್ತಾರಾ ಎಂಬುದು ಸದ್ಯದ ಟ್ವಿಸ್ಟ್. ಇದನ್ನು ಸಪ್ತಮಿ ನಿರೂಪಣೆ ಮಾಡುವ ಮೂಲಕ ಸೀರಿಯಲ್ ಕುರಿತು ಮತ್ತಷ್ಟು ಕುತೂಹಲ ಮೂಡುವಂತೆ ಮಾಡಿದ್ದಾರೆ. ಸದ್ಯ ರಿವೀಲ್ ಆಗಿರೋ ಸಪ್ತಮಿ ಪ್ರೋಮೋ ಸದ್ದು ಮಾಡುತ್ತಿದೆ.

‘ಕಾಂತಾರ’ ಚಿತ್ರದ ಸಕ್ಸಸ್ ಅನ್ನು ನಟಿ ಸದುಪಯೋಗಪಡಿಸಿಕೊಂಡಿದ್ದಾರೆ. ಕನ್ನಡದ ಜೊತೆ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿ ಸಪ್ತಮಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನಲ್ಲಿಯೂ ಕನ್ನಡದ ಬೆಡಗಿಗೆ ಸಖತ್ ಬೇಡಿಕೆಯಿದೆ. ಇದನ್ನೂ ಓದಿ:ಗಣರಾಜ್ಯೋತ್ಸವ ದಿನದಂದು ನಟ ದೀಕ್ಷಿತ್ ಶೆಟ್ಟಿ ಸಂಕಲ್ಪ

ತೆಲುಗು ಅಂಗಳದಲ್ಲಿ ಮೊದಲೇ ಕನ್ನಡತಿಯರ ದರ್ಬಾರ್ ಜಾಸ್ತಿಯಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ, ರುಕ್ಮಿಣಿ ವಸಂತ್ (Rukmini Vasanth) ಮಧ್ಯೆ ಸಪ್ತಮಿ ಕೂಡ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಅಳಿದು ತೂಗಿ ಸಿನಿಮಾ ಒಪ್ಪಿಕೊಳ್ತಿದ್ದಾರೆ.

Share This Article