ನನ್ನ ಲೈಫ್‌ನಲ್ಲಿ ಆಗಿದ್ದು ಬೇರೆಯವರಿಗೆ ಆಗಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಸಂಜನಾ ಗಲ್ರಾನಿ ಪ್ರತಿಕ್ರಿಯೆ

Public TV
1 Min Read

ಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಭುಗಿಲೆದ್ದ ಹಿನ್ನೆಲೆ ಸ್ಯಾಂಡಲ್‌ವುಡ್‌ನಲ್ಲೂ Sandalwood) ನಟಿಯರಿಗಾಗಿ ಕೇರಳದಂತೆಯೇ ತನಿಖಾ ಸಮಿತಿ ರಚಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೇ ಫೈರ್ ಸಂಸ್ಥೆ ಬಗ್ಗೆ ಮತ್ತು ಸ್ಯಾಂಡಲ್‌ವುಡ್ ಕಾಸ್ಟಿಂಗ್ ಕೌಚ್ (Casting Couch) ಬಗ್ಗೆ ಮಾತನಾಡಿದ್ದಾರೆ. ನನ್ನ ಲೈಫ್‌ನಲ್ಲಿ ಆಗಿದ್ದು, ಬೇರೆ ಅವರಿಗೆ ಆಗಬಾರದು. ಹೀರೋಯಿನ್ ಮಾಡ್ತೀನಿ ಅಂತ ತಪ್ಪು ದಾರಿಗೆ ಎಳೆಯುತ್ತಾರೆ ಎಂದು ‘ಪಬ್ಲಿಕ್‌ ಟಿವಿ’ಗೆ ಸಂಜನಾ ಗಲ್ರಾನಿ (Sanjjanaa Galrani) ಮಾತನಾಡಿದ್ದಾರೆ. ಇದನ್ನೂ ಓದಿ:ನಾನು ನಿರಪರಾಧಿ ಅಂತ ಸಾಬೀತುಪಡಿಸಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತೀನಿ: ನಟ ನಿವಿನ್ ಪೌಲಿ

ನಾನು ಈ ಹಿಂದೆಯೇ ಮೀಟೂ ಪ್ರಕರಣದಲ್ಲಿ ಮಾತಾಡಿದ್ದೆ, ಆಗ ಏನು ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನಡೆದಿದ್ದು ನಡೆದಂಗೆ ಹೇಳಿದ್ರೆ ಅದೇನೋ ಅಂತಾರಲ್ಲ ಹಾಗಾಯಿತು. ನನ್ನ ಲೈಫ್‌ನಲ್ಲಿ ನಡೆದಿದ್ದು, ಬೇರೆ ಅವರಿಗೆ ಆಗಬಾರದು. ಚಿತ್ರರಂಗಕ್ಕೆ ಬರುವ ಹೊಸ ನಟಿಯರಿಗೆ ಈ ರೀತಿ ತೊಂದರೆ ಆಗಬಾರದು. ಅವತ್ತು ಅದರಿಂದ ಹೊರಗೆ ಬಂದು 55 ಸಿನಿಮಾ ಮಾಡಿ ಗುರುತಿಸಿಕೊಂಡಿದ್ದೇನೆ. ಈಗಲೂ 2 ಸಿನಿಮಾ ಮಾಡುತ್ತಿದ್ದೇನೆ. ನನಗೆ ಆದ ಹಾಗೆ ಬೇರೆ ಯಾರಿಗೂ ಆಗಬಾರದು ಎಂದು ಮಾತನಾಡಿದ್ದಾರೆ.

‘ಫೈರ್’ ಎನ್ನುವ ಸಂಸ್ಥೆಯದು ಅದ್ಭುತವಾದ ಐಡಿಯಾ. ನಟ ಚೇತನ್ ಅವರು ನನಗೂ ಕರೆ ಮಾಡಿ ತಿಳಿಸಿದರು. ಇದು ಮುಂದೆವರೆಯಬೇಕು. ಸದ್ಯ ನಟಿಯರ ಕಡೆಯಿಂದ ಸರ್ಕಾರಕ್ಕೆ ಪತ್ರ ಹೋಗಿದೆ. ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವ ಜೊತೆ ಆಫೀಸ್ ಕೂಡ ವ್ಯವಸ್ಥೆ ಮಾಡಬೇಕಿದೆ. ಇದು ಆ್ಯಕ್ಟೀವ್ ಆಗಿ ನಡೆಯಬೇಕಿದೆ. ಇದನ್ನು ನಾವು ಎದುರು ನೋಡಬೇಕಿದೆ ಎಂದಿದ್ದಾರೆ.

ಇನ್ನೂ ಕನ್ನಡ ಇಂಡಸ್ಟ್ರಿ ಕೆಟ್ಟ ಜಾಗ ಅಲ್ಲ. ಒಕ್ಕೂಟದಲ್ಲಿರೋ ನಟ, ನಿರ್ದೇಶಕ, ನಿರ್ಮಾಪಕರು ಒಳ್ಳೆಯವರು. ಒಕ್ಕೂಟದಲ್ಲಿ ಇರದೇ ಹೊರಗಡೆ ಸಿನಿಮಾ ಮಾಡ್ತೀನಿ, ಫೈನಾನ್ಸ್ ಮಾಡ್ತಿದ್ದೀನಿ ಅಂತಾ ಹೇಳಿಕೊಂಡು ಓಡಾಡುತ್ತಾರೆ. ಹೀರೋಯಿನ್ ಮಾಡ್ತೀನಿ ಚಾನ್ಸ್ ಕೊಡಿಸ್ತೀನಿ ಅಂತಾ ಹೇಳಿ ಕನ್ನಡ ಇಂಡಸ್ಟ್ರಿ ಹೆಸರು ಹಾಳು ಮಾಡುತ್ತಾರೆ ಎಂದು ನಟಿ ಸಂಜನಾ ಮಾತನಾಡಿದ್ದಾರೆ.

Share This Article