ಸಂಜನಾ ಗಲ್ರಾನಿಗೆ ‘ಡ್ರಗ್ಸ್‌’ ಸಂಕಷ್ಟ – ಸುಪ್ರೀಂಗೆ ಮೇಲ್ಮನವಿಗೆ ಪೊಲೀಸರ ಸಿದ್ಧತೆ

Public TV
1 Min Read

ಟಿ ಸಂಜನಾ ಗಲ್ರಾನಿಗೆ ಡ್ರಗ್ಸ್‌ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಕೇಸ್‌ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಲ್ರಾನಿ ಸಿಲುಕಿದ ಬಳಿಕ ಹೈಕೋರ್ಟ್‌ನಲ್ಲಿ ಪ್ರಕರಣ ರದ್ದು ಮಾಡಿಸಿಕೊಂಡಿದ್ದರು. ಆದರೀಗ, ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಹೋಗಲು ತಯಾರಿ ಮಾಡಿದೆ. ಬಹುತೇಕ ಈ ತಿಂಗಳ ಅಂತ್ಯದ ಒಳಗಾಗಿ ರದ್ದಾಗಿರೋ ಎಫ್‌ಐಆರ್ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ.

ನಟಿ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ನಿರ್ಧರಿಸಲಾಗಿದೆ. ಹೈಕೋರ್ಟ್‌ನಲ್ಲಿ ಪ್ರಕರಣ ವಜಾ ಬಳಿಕ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆದಿದೆ. ಸಿಸಿಬಿ ಪೊಲೀಸರಿಂದ ಸಂಜನಾ ಅವರನ್ನು ಬಂಧಿಸಲಾಗಿತ್ತು. ಜೈಲಿನಲ್ಲಿ ಇದ್ದು ಜಾಮೀನಿನ ಮೇಲೆ ನಟಿ ಹೊರಗೆ ಬಂದಿದ್ದರು. ಹೀಗಾಗಿ, ಸಂಜನಾ ಗಲ್ರಾನಿ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಭೆ ನಡೆಸಿ ಸರ್ಕಾರದ ಮಟ್ಟದಲ್ಲಿ ಅರ್ಜಿ ತಯಾರಿಯಾಗಿದೆ. ಪ್ರಾಸಿಕ್ಯೂಷನ್ ಅನುಮತಿ ಬರುತ್ತಾ ಇದ್ದಂತೆ ಅರ್ಜಿ ಸಲ್ಲಿಕೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.

Share This Article