3 ವರ್ಷಗಳ ನಂತರ ಡಿವೋರ್ಸ್ ಬಗ್ಗೆ ಮೌನ ಮುರಿದ ‘ಹೀರಾಮಂಡಿ’ ನಟಿ

Public TV
1 Min Read

ಬಾಲಿವುಡ್‌ನಲ್ಲಿ ಸದ್ಯ ರಿಲೀಸ್ ಆಗಿರುವ ‘ಹೀರಾಮಂಡಿ’ (Heeramandi) ವೆಬ್ ಸಿರೀಸ್‌ಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೀಗ ‘ಹೀರಾಮಂಡಿ’ ನಟಿ ಸಂಜೀದಾ ಶೇಖ್ (Sanjeeda Shaikh) ತಮ್ಮ ಡಿವೋರ್ಸ್ (Divorce) ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 3 ವರ್ಷಗಳ ನಂತರ ದಾಂಪತ್ಯ ಜೀವನ ಅಂತ್ಯವಾಗಿದ್ದೇಕೆ? ಎಂದು ನಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

2021ರಲ್ಲಿ ತಮ್ಮ ಪತಿ ಅಮೀರ್ ಅಲಿ ಜೊತೆಗೆ ಕೆಲ ಮನಸ್ತಾಪಗಳಿಂದ ನಟಿ ಬೇರೆಯಾದರು. ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದರು. ಇದಾದ ಬಳಿಕ ಎಲ್ಲಿಯೂ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡದೇ ನಟಿ ಮೌನವಾಗಿದ್ದರು. ಡಿವೋರ್ಸ್ ನಂತರ ಮಾನಸಿಕವಾಗಿ ಎದುರಿಸಿದ ಕಷ್ಟದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಟರ್ಕಿಯಲ್ಲಿ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

ಪತಿಯಿಂದ ಬೇರೆಯಾದ ಮೇಲೆ ಬಹಳ ಕಷ್ಟಕರ ಜೀವನ ನೋಡಿದೆ. ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳದೆ, ಎಲ್ಲಾ ಕಠಿಣ ಹಂತಗಳನ್ನು ಎದುರಿಸಬೇಕಾಯ್ತು. ನನ್ನ ಜೀವನದ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ವ್ಯಕ್ತಿ ನಾನಲ್ಲ. ನನಗೆ ಕ್ಯಾಮೆರಾ ಅವಶ್ಯಕತೆಯೂ ನನಗಿಲ್ಲ. ವೈಯಕ್ತಿಕ ವಿಷಯಗಳನ್ನು ನನ್ನ ಫ್ಯಾಮಿಲಿ ಮತ್ತು ಸ್ನೇಹಿತರ ಜೊತೆ ಮಾತನಾಡುತ್ತೇನೆ. ನಾನು ಇಂದು ಈ ಪರಿಸ್ಥಿತಿಯನ್ನು ಎದುರಿಸಿ ಗಟ್ಟಿಯಾಗಿ ನಿಂತಿರುವುದು ನನ್ನ ಮಗಳಿಂದ ಎಂದು ನಟಿ ಮಾತನಾಡಿದ್ದಾರೆ.

 

View this post on Instagram

 

A post shared by Sanjeeda Shaikh (@iamsanjeeda)

ನಾನು ಕಠಿಣ ಪರಿಸ್ಥಿತಿಯಿಂದ ಹೊರಬರಲು ನನ್ನ ಮಗಳು ಶಕ್ತಿಯಾದಳು. ಪತಿಯಿಂದ ಡಿವೋರ್ಸ್ ಪಡೆದು ಆ ಸಂಬಂಧದಿಂದ ಹೊರಬಂದಾಗ ನನ್ನ ತಾಯಿ ಮಾಡಿದ ಸಹಾಯವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ ಎಂದು ಸಂದರ್ಶನದಲ್ಲಿ ನಟಿ ಭಾವುಕರಾಗಿದ್ದಾರೆ.

ಅಂದಹಾಗೆ, ಇದೀಗ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿರುವ ‘ಹೀರಾಮಂಡಿ’ ವೆಬ್ ಸರಣಿಯಲ್ಲಿ ನಟಿ ಸಂಜೀದಾ ಶೇಖ್ ನಟಿಸಿದ್ದಾರೆ. ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಸೇರಿದಂತೆ ಅನೇಕರು ನಟಿಸಿದ್ದಾರೆ.

Share This Article