ಸ್ಟೈಲೀಶ್ ಆದ ಸಂಜನಾ ಬುರ್ಲಿ ಲುಕ್‌ಗೆ ಪಡ್ಡೆಹುಡುಗರು ಫಿದಾ

Public TV
3 Min Read

‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಸೀರಿಯಲ್ ಖ್ಯಾತಿಯ ಸಂಜನಾ ಬುರ್ಲಿ (Sanjana Burli) ಅವರು ಬೋಲ್ಡ್ ಅವತಾರದಲ್ಲಿ ಕಾಣಿಕೊಂಡಿದ್ದಾರೆ. ನಟಿಯ ನಯಾ ಲುಕ್ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ.  ಇದನ್ನೂ ಓದಿ:ತಂದೆಯ ಮೊದಲ ಬೈಕ್ ಏರಿ ಸಲ್ಮಾನ್ ಖಾನ್ ಫೋಟೋಶೂಟ್

ಕಂಠಿ ಮನದರಸಿ ಸ್ನೇಹಾ ಪಾತ್ರಕ್ಕೆ ಗುಡ್ ಬೈ ಹೇಳಿದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸದಾ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆಯೋ ಸಂಜನಾ ಇದೀಗ ಪಿಂಕ್ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣ ಸ್ಕರ್ಟ್ ಧರಿಸಿ ಮಿಂಚಿದ್ದಾರೆ. ನಟಿಯ ಬೋಲ್ಡ್ ಪೋಸ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಸಂಜನಾ ಅವರು ಡಿಸಿ ಸ್ನೇಹಾ ಪಾತ್ರಕ್ಕೆ ಗುಡ್ ಬೈ ಹೇಳಿರೋದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ. ಆದರೆ ಸೀರಿಯಲ್‌ನಲ್ಲಿ ಅವರ ಪಾತ್ರದ ಸಾವಿನ ಮೂಲಕ ಅಂತ್ಯವಾಗಿದೆ. ಸಂಜನಾ ಮತ್ತೆ ಸ್ನೇಹಾ ಪಾತ್ರದಲ್ಲಿ ನಟಿಸಬೇಕು ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಸ್ನೇಹಾ ಪಾತ್ರದಲ್ಲಿ ಸಂಜನಾ ಜೀವಿಸಿದ್ದರು. ಅವರ ಪಾತ್ರ ಅಂತ್ಯವಾದ್ಮೇಲೆ ನಟಿಯ ಭಾವನ್ಮಾತಕ ಪೋಸ್ಟ್ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:BBK 11: ಮತ್ತೆ ವರಸೆ ಬದಲಿಸಿದ ರಜತ್‌- ಸುಸ್ತಾದ ಮನೆ ಮಂದಿ

ನಮಸ್ತೆ ಪ್ರಿಯರೇ, ಎಲ್ಲಾ ಫ್ಯಾನ್ಸ್‌ಗೆ ನಾನು ಒಂದು ಸುದ್ದಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಪ್ರತಿಯೊಂದು ದೊಡ್ಡ ವಿಷಯವೂ ಕೊನೆಗೊಳ್ಳುತ್ತದೆ. ಅದರಂತೆ ಈ ಮಹತ್ವದ ಪಾತ್ರದೊಂದಿಗೆ ನನ್ನ ಪ್ರಯಾಣವೂ ಕೊನೆಗೊಂಡಿದೆ. ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ನ ಸ್ನೇಹಾ ಪಾತ್ರವು ಕೊನೆಯಾಗುತ್ತಿದೆ. ಕಳೆದ 3 ವರ್ಷಗಳಿಂದ ಸ್ನೇಹಾ ಪಾತ್ರವನ್ನು ನಿರ್ವಹಿಸುವುದು ನನ್ನ ನಟನಾ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿತ್ತು. ಈ ಸಮಯ ಎಷ್ಟು ವೇಗವಾಗಿ ಮುಗಿಯಿತು ಅನ್ನೋದೇ ಗೊತ್ತಾಗಲಿಲ್ಲ. ಈ ಸೀರಿಯಲ್‌ನಲ್ಲಿ ನಾನು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದೆ. ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನನಗೆ ಈ ಉತ್ತಮ ಪಾತ್ರವನ್ನು ನೀಡಿದ್ದಕ್ಕಾಗಿ ಮತ್ತು ನನ್ನನ್ನು ಸ್ನೇಹಾ ಆಗಿ ಆಯ್ಕೆ ಮಾಡಿದ್ದಕ್ಕಾಗಿ ವಾಹಿನಿ ಮತ್ತು ಇಡೀ ತಂಡಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ತಿಳಿಸಿದರು.

ಆದರೆ ಈಗ ನಾನು ಮುಂದುವರಿಯುವ ಸಮಯ ಬಂದಿದೆ. ಕೆಲವು ಅನಿವಾರ್ಯ ಸಂದರ್ಭಗಳು ಮತ್ತು ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ಭಾರವಾದ ಹೃದಯದಿಂದ ಈ ಸೀರಿಯಲ್ ಅನ್ನು ತೊರೆಯುವ ಸ್ಥಿತಿ ನಿರ್ಮಾಣವಾಯಿತು. ನನ್ನ ಜೀವನದಲ್ಲಿ ಈ ಸಮಯದಲ್ಲಿ ಸಾಧಿಸಲು ನನಗೆ ಇತರ ಸವಾಲುಗಳಿವೆ. ಈ ಪ್ರಾಜೆಕ್ಟ್‌ನಲ್ಲಿನ ಈ ಪಾತ್ರಕ್ಕಾಗಿ ನಾನು ನಟಿನಾಗಿ ಪಡೆದ ಅಪಾರ ಪ್ರೀತಿ ಮತ್ತು ಮನ್ನಣೆಯು ನನ್ನ ದೊಡ್ಡ ಪ್ರಶಸ್ತಿ. ಅದು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ನಿಮ್ಮಲ್ಲಿ ಹೆಚ್ಚಿನವರು ಪಾತ್ರವು ಸಾಯುವುದನ್ನು ನೋಡಿ ದುಃಖಿತರಾಗಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ, ನಾಯಕಿಯಾಗಿ ನಾನು ನಟಿಸಿದ್ದ ಪಾತ್ರವನ್ನು ಯಾರು ಬದಲಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಅದನ್ನು ನಾವು ಪಾಸಿಟಿವ್ ಆಗಿ ತೆಗೆದುಕೊಳ್ಳೋಣ ಎಂದಿದ್ದರು.

ಸ್ವಲ್ಪ ಸಮಯದ ನಂತರ ವಿಭಿನ್ನ ಪಾತ್ರಗಳಲ್ಲಿ ನನ್ನ ಅಭಿಮಾನಿಗಳನ್ನು ಭೇಟಿಯಾಗಲು ಆಶಿಸುತ್ತಿದ್ದೇನೆ, ಆದರೆ, ಸದ್ಯದ ಮಟ್ಟಿಗೆ ನನ್ನ ಪಾತ್ರ ಅಂತ್ಯವಾಗಿದೆ. ಕಳೆದ 3 ವರ್ಷಗಳಲ್ಲಿ ಇಡೀ ಕರ್ನಾಟಕ ನನ್ನ ಮೇಲೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನನ್ನ ವೈಯಕ್ತಿಕ ಮತ್ತು ವೃತ್ತಿಪರ ಪ್ರಗತಿಗೆ ಸಂಬಂಧಿಸಿದಂತೆ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ನನ್ನ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್ ಅನ್ನು ನೋಡ್ತಾ ಇರಿ. ಈಗ ಪಾಸಿಟಿವ್ ನೋಟ್‌ನೊಂದಿಗೆ ಮುಂದುವರಿಯೋಣ. ಏನಾಗಲಿ ಮುಂದೆ ಸಾಗು ನೀ.. ಮತ್ತೊಮ್ಮೆ ತೆರೆ ಮೇಲೆ ಭೇಟಿ ಆಗೋಣ ಬೇರೆ ವಿಭಿನ್ನ ಪಾತ್ರ ಜೊತೆಗೆ, ಶೀಘ್ರದಲ್ಲಿ ನನ್ನ ಅಭಿಮಾನಿಗಳೇ ನನ್ನ ಸ್ಪೂರ್ತಿ, ಶಕ್ತಿ. ಚಿಯರ್ಸ್ ಸಂಜನಾ ಬುರ್ಲಿ ಎಂದು ಅವರು ಬರೆದುಕೊಂಡಿದ್ದರು.

ಇನ್ನೂ ಸಿನಿಮಾ, ಸೀರಿಯಲ್ ಯಾವುದೇ ಆಗಿರಲಿ ಆದಷ್ಟು ಬೇಗ ಸಂಜನಾ ತೆರೆಯ ಮೇಲೆ ಅಬ್ಬರಿಸಲಿ ಎಂಬುದೇ ಅಭಿಮಾನಿಗಳು ಆಶಯ.

Share This Article