ಇಂಟರ್‌ನೆಟ್‌ನಲ್ಲಿ ಸಂಗೀತಾ ಟ್ರೆಂಡಿಂಗ್- ರೂಪೇಶ್ ಶೆಟ್ಟಿ ದಾಖಲೆ ಉಡೀಸ್

Public TV
2 Min Read

ಸಂಗೀತಾ ಶೃಂಗೇರಿ (Sangeetha Sringeri) ಅವರು ಈ ಹೆಸರು ಕೇಳಿದರೆ ಸಾಕು ಬಿಗ್‌ ಬಾಸ್ (Bigg Boss Kannada 10) ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ. ಮಾಡಿದ್ದೆ ಕೆಲವೇ ಸಿನಿಮಾ. ಆದರೆ ಬಿಗ್ ಬಾಸ್‌ಗೆ ಈ ಹುಡುಗಿ ಬಂದ ಮೇಲೆ ಮಾಡಿದ ಮೋಡಿ ಇದೆಯಲ್ಲ. ಅದನ್ನ ಮಾತ್ರ ಯಾರೂ ತಡೆಯಲು ಸಾಧ್ಯ ಇಲ್ಲ. ಹಾಗಿದ್ದರೆ ಸಂಗೀತಾಗೆ ಎಷ್ಟು ಲಕ್ಷ ಜನರು ಮೆಚ್ಚಿಕೊಂಡಿದ್ದಾರೆ? ಯಾಕೆ ಇದೇ ಹುಡುಗಿಯನ್ನು ಕರುನಾಡು ಆಯ್ಕೆ ಮಾಡಿಕೊಂಡಿದೆ? ಏನಿದರ ಹಿಂದಿನ ರಹಸ್ಯ? ಇಲ್ಲಿದೆ ಮಾಹಿತಿ.

ಇನ್ನೇನು ಬಿಗ್‌ ಬಾಸ್ ಕಾರ್ಯಕ್ರಮ ಮುಗಿಯುತ್ತಿದೆ. ಕೆಲವೇ ದಿನಗಳಲ್ಲಿ ಅಂತಿಮ ಪರದೆ ಬೀಳಲಿದೆ. ಈ ಹೊತ್ತಲ್ಲಿ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಒಂದೇ. ಯಾರು ವಿನ್ನರ್? ಉತ್ತರಕ್ಕಾಗಿ ಇನ್ನು ಕೆಲವು ದಿನ ಕಾಯಬೇಕು. ಈ ಸಮಯದಲ್ಲಿಯೇ ಸಂಗೀತಾ ಹೆಸರು ಕೇಳಿ ಬರುತ್ತಿದೆ. ಮಾಡಿದ್ದು ಕೆಲವೇ ಸಿನಿಮಾ. ಅದರಲ್ಲೂ ‘777 ಚಾರ್ಲಿ’ ಸಿನಿಮಾ ಮಾಡಿದ ಮೇಲೆ ಇವರಿಗೆ ಹೆಸರು ಬಂತು. ಈಗ ಬಿಗ್ ಬಾಸ್‌ನಲ್ಲಿ ವಿನ್ನರ್ ಆಗುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾಗೆ ಠಕ್ಕರ್- ತೆಲುಗಿನಲ್ಲಿ ರುಕ್ಮಿಣಿ ವಸಂತ್‌ಗೆ ಬಂಪರ್ ಆಫರ್

ಯಾರು ಏನೇ ಹೇಳಲಿ, ಸಂಗೀತಾ (Sangeetha Sringeri) ಮಾತ್ರ ಬಿಗ್ ಬಾಸ್‌ನನಲ್ಲಿ ಅದ್ಭುತ ಆಟ ಆಡಿದ್ದಾರೆ. ಎಲ್ಲರನ್ನೂ ಹಿಂದಿಕ್ಕಿ ಕೆಲಸ ಮಾಡಿದ್ದಾರೆ. ನಾನುಂಟು ನನ್ನ ಲೋಕ ಉಂಟು ಎನ್ನುವಂತೆ ಬದುಕಿದ್ದಾರೆ. ಕೆಲವರಿಗೆ ಇವರ ವರ್ತನೆ ಇಷ್ಟ ಆಗಿಲ್ಲ. ಆದರೆ ಎಷ್ಟು ದಿನ ಇವರನ್ನು ಅವಾಯ್ಡ್ ಮಾಡುತ್ತಾರೆ. ಅದು ಸಾಧ್ಯ ಇಲ್ಲ. ಹೀಗಾಗಿಯೇ ಈಗ ಬಿಗ್ ಬಾಸ್‌ನಲ್ಲಿ ಸಂಗೀತಾ ಹವಾ ಎದ್ದಿದೆ. ಲಕ್ಷ ಲಕ್ಷ ಬೆಂಬಲವನ್ನ ಸೋಷಿಯಲ್ ಮೀಡಿಯಾದಲ್ಲಿ ಪಡೆದಿದ್ದಾರೆ.

ಬಿಗ್‌ ಬಾಸ್ ಫೈನಲ್ ತಲುಪುವ ಹೊತ್ತಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಒಂದು ಶುರುವಾಗುತ್ತೆ. ಕಳೆದ ಸೀಸನ್‌ನಲ್ಲಿ ರೂಪೇಶ್ ಶೆಟ್ಟಿ ಈ ಟ್ರೆಂಡ್‌ಗೆ ಸಾಕ್ಷಿಯಾಗಿದ್ದರು. ಈಗ ಸಂಗೀತ ಶೃಂಗೇರಿ ಸೇರಿಕೊಂಡಿದ್ದಾರೆ. ರೂಪೇಶ್ ಶೆಟ್ಟಿ (Roopesh Shetty) ಮಾಡಿರೋ ಹಳೆಯ ದಾಖಲೆಯನ್ನು ನಟಿ ಬ್ರೇಕ್ ಮಾಡಿದ್ದಾರೆ. ವಿಜಯಿಭವ ಸಂಗೀತ ಎನ್ನುವ ಹೆಸರಿನಲ್ಲಿ ಹ್ಯಾಷ್‌ಟ್ಯಾಗ್ ಜೊತೆಗೆ ಶೇರ್ ಮಾಡಲಾಗಿದೆ. ಈ ಹ್ಯಾಷ್‌ಟ್ಯಾಗ್ ವಿಜಯಿಭವ ಸಂಗೀತ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷ ಲಕ್ಷ ನಂಬರ್ಸ್ ತಲುಪಿದೆ.

ಸೋಷಿಯಲ್ ಮೀಡಿಯಾದಲ್ಲಿ ಭಾರತದ 5ನೇ ಟ್ರೆಂಡಿಂಗ್ ಕಂಟೆಂಟ್ ಜಾಗಕ್ಕೆ ತಲುಪಿದೆ. ಸುಮಾರು 7 ಲಕ್ಷಕ್ಕೂ ಹೆಚ್ಚಿನ ಜನ ಟ್ವಿಟರ್‌ನಲ್ಲಿ ವಿಜಯಿಭವ ಸಂಗೀತ ಎನ್ನುವ ಹ್ಯಾಷ್‌ಟ್ಯಾಗ್ ಶೇರ್ ಮಾಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ವಿನಯ್ (Vinay Gowda) ಹೆಸರಿನಲ್ಲಿ ಕೂಡ ಹ್ಯಾಷ್‌ಟ್ಯಾಗ್ ಬಳಸಿ ಟ್ರೆಂಡ್ ಮಾಡಲಾಯ್ತು. ವಿನಯ್ ಹೆಸರಿನಲ್ಲಿ ಇದ್ದ ದಾಖಲೆ ಮುರಿದು ಸಂಗೀತ ಫ್ಯಾನ್ಸ್ ಹೊಸ ದಾಖಲೆ ಬರೆದಿದ್ದಾರೆ. ಫಿನಾಲೆ ಟೈಮ್‌ನಲ್ಲಿ ಈ ಹ್ಯಾಷ್‌ಟ್ಯಾಗ್ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಬಿಗ್ ಬಾಸ್ (Bigg Boss) ಇನ್ನೇನು ಮುಗಿಯಲು ಬರುತ್ತಿದೆ. ಸಂಗೀತಾಗೆ ಹೆಚ್ಚು ಹೆಚ್ಚು ಜನರ ಸಪೋರ್ಟ್ ಸಿಗುತ್ತಿದೆ. ಈ ನಂಬರ್ಸ್‌ ಇವರೇನಾ ವಿನ್ನರ್ ಎನ್ನುವ ಪ್ರಶ್ನೆ ಹುಟ್ಟುಹಾಕ್ತಿದೆ. ಆದರೆ ಇವರ ನಡುವೆ ಉಳಿದ ಸದಸ್ಯರು ಕೂಡ ಸ್ಪರ್ಧೆಗೆ ಸೆಡ್ಡು ಹೊಡೆಯುತ್ತಿದ್ದಾರೆ. ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎನ್ನುವುದು ಕೊನೇ ಹಂತ. ಎಲ್ಲದರ ನಡುವೆ ಸಂಗೀತಾ ಮಾತ್ರ ಬಾವುಟ ಹಾರಿಸಲು ಸಜ್ಜಾಗಿದ್ದಾರೆ. ಸಂಗೀತಾ ವಿನ್ನರ್ ಆಗುತ್ತಾರೆ? ಇಲ್ಲವಾ? ಉತ್ತರ ಕೆಲವೇ ದಿನಗಳಲ್ಲಿ ಸಿಗಲಿದೆ.

Share This Article