ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟ ಸಂಯುಕ್ತ!

Public TV
1 Min Read

ಬೆಂಗಳೂರು: ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಎಲ್ಲಿ ಹೋದರೂ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಎಲ್ಲಾ ಪೇಜ್‍ಗಳಲ್ಲಿ ಸಂಯುಕ್ತರನ್ನು ಟ್ರೋಲ್ ಮಾಡುತ್ತಿದ್ದಾರೆ. ತನ್ನನ್ನು ಟ್ರೋಲ್ ಮಾಡಿದವರಿಗೆ ನಟಿ ಇದೀಗ ಟಾಂಗ್ ನೀಡಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಂಯುಕ್ತರಿಗೆ ಟ್ರೋಲ್‍ಗಳ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಂಯುಕ್ತ, ನಾನು ಏನು ಮಾಡಬೇಕು ಎನ್ನವುದು ನನಗಿಂತ ಚೆನ್ನಾಗಿ ನಿಮಗೆ ಗೊತ್ತಾಗುತ್ತೆ, ಅದು ಹೇಗೆ? ಟ್ರೋಲ್ ಮಾಡಲು ನಿಮಗೆ ಟೈಮ್ ಎಲ್ಲಿ ಸಿಗುತ್ತೆ? ಎಂದು ಟ್ರೋಲ್ ಮಾಡುವವರಿಗೆ ಮರು ಪ್ರಶ್ನೆ ಹಾಕಿದ್ದಾರೆ.

ನನ್ನ ಫೋಟೋಗನ್ನು ಟ್ರೋಲ್ ಮಾಡುವುದರಿಂದ ನಿಮಗೆ ಸಂತೋಷವಾಗುತ್ತದೆ ಎನ್ನುವುದಾದರೆ ನನಗೂ ಸಂತೋಷವಿದೆ. ನಾನು ಒಬ್ಬ ನಟಿಯಾಗಿ ನಿಮಗೆ ರಂಜಿಸುವುದಷ್ಟೇ ನನ್ನ ಕರ್ತವ್ಯ ಎಂದು ಸಂಯುಕ್ತ ಹೇಳಿದ್ದಾರೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟ ಸಂಯುಕ್ತ ಒಂದಲ್ಲ ಒಂದು ಕಿರಿಕ್ ಮಾಡಿಕೊಳ್ಳುತ್ತಾರೆ ಎಂದು ಚಿತ್ರರಂಗದಲ್ಲಿ ಆರೋಪವಿದೆ. ಈ ಹಿಂದೆ ಕಾಲೇಜ್ ಕುಮಾರ್ ಚಿತ್ರದ ಸಮಯದಲ್ಲಿ ಚಿತ್ರದ ನಿರ್ಮಾಪಕರೊಂದಿಗೆ ಸಂಯುಕ್ತ ಕಿರಿಕ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-5 ರಲ್ಲೂ ಸಹ ಸ್ಪರ್ಧಿ ಜೊತೆ ಸಂಯುಕ್ತ ಜಗಳವಾಡಿದ್ದರು.

ಸದ್ಯ ಸಂಯುಕ್ತ ಹೆಗ್ಡೆ ಟಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್‍ನಲ್ಲಿ ಕಿರಿಕ್ ಪಾರ್ಟಿ ಸಿನಿಮಾ ರಿಮೇಕ್ ಆಗಿದ್ದು, ಆ ಚಿತ್ರದಲ್ಲೂ ಸಂಯುಕ್ತ ಆರ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಈ ಚಿತ್ರಕ್ಕೆ ‘ಕಿರಾಕ್ ಪಾರ್ಟಿ’ ಎಂದು ಹೆಸರಿಡಲಾಗಿದೆ. ಇದೇ ತಿಂಗಳಿನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *