Bigg Boss ವರ್ತೂರು ಸಂತೋಷ್‌ ಆಟದ ಬಗ್ಗೆ ಸಮೀಕ್ಷಾ ಮೆಚ್ಚುಗೆ

Public TV
1 Min Read

ಬಿಗ್ ಬಾಸ್ ಮನೆಯ (Bigg Boss Kannada) ಅಸಲಿ ಆಟ ಈಗ ಶುರುವಾಗಿದೆ. ವರ್ತೂರು ಸಂತೋಷ್ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಸದ್ಯ ತಾಯಿಯ ಬಳಿ ಸಂತೋಷ್ ಕಣ್ಣೀರು ಹಾಕಿರೋ ಎಮೋಷನಲ್ ದೃಶ್ಯ ನೋಡಿ ಅನೇಕರು ಭಾವುಕರಾಗಿದ್ದಾರೆ. ಅದರಂತೆಯೇ ‘ಸುಬ್ಬಲಕ್ಷ್ಮಿ ಸಂಸಾರ’ ಸೀರಿಯಲ್ ನಟಿ ಸಮೀಕ್ಷಾ ಗೌಡ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವರ್ತೂರು ಸಂತೋಷ್ (Varthur Santhosh) ಪರ ನಟಿ ಮಾತನಾಡಿದ್ದಾರೆ.

ಬಿಗ್ ಬಾಸ್‌ನಲ್ಲಿರುವಾಗಲೇ ಹುಲಿ ಉಗುರಿನ ಕೇಸ್ ವಿಚಾರವಾಗಿ ಜೈಲಿಗೆ ಹೋಗಿ ಬಂದಿರೋ ವರ್ತೂರು ಸಂತೋಷ್ ಈ ವಿಷ್ಯವಾಗಿ ನೊಂದಿದ್ದಾರೆ. ಬಿಗ್ ಮನೆಗೆ ಬಂದ ಮೇಲೂ ಆ ನೋವಿನ ಗಾಯದಿಂದ ಹೊರ ಬರಲು ಆಗದೇ ಒದಾಡಿದ್ದಾರೆ. ಇದೀಗ ಸಂಕಟದಲ್ಲಿರೋ ವರ್ತೂರು ಪರವಾಗಿ ನಟಿ ಸಮೀಕ್ಷಾ (Samikshaa Gowda) ಸೋಷಿಯಲ್ ಮೀಡಿಯಾ ಮೂಲಕ ರಿಯಾಕ್ಟ್ ಮಾಡಿದ್ದಾರೆ.

ನಾನು ಬಿಗ್ ಬಾಸ್ ಅಭಿಮಾನಿಯಲ್ಲ, ಆದರೆ ಈ ಶೋವನ್ನು ಅರ್ಥಮಾಡಿಕೊಳ್ಳವಷ್ಟು ಸಮರ್ಥನೂ ಅಲ್ಲ ಎಂದು ಸಮೀಕ್ಷಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಸಂತೋಷ್ ಎನ್ನುವ ವ್ಯಕ್ತಿಯನ್ನು ಮೆಚ್ಚಿದೆ. ನನಗೆ ಮುಂದಿನ ಜನ್ಮ ಸಿಕ್ಕರೆ. ಈ ರೀತಿಯ ಅಣ್ಣನನ್ನು ದಯ ಪಾಲಿಸಿ ಅಂತ ದೇವರಲ್ಲಿ ಬೇಡುವೆ ಎಂದು ಸಮೀಕ್ಷಾ ಭಾವುಕರಾಗಿದ್ದಾರೆ. ಈ ಮೂಲಕ ವರ್ತೂರು ಸಂತೋಷ್‌ಗೆ ನಟಿ ಬೆಂಬಲಿಸಿದ್ದಾರೆ. ಸಮೀಕ್ಷಾ ನಡೆಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಬಾ, ಇದೊಂದು ಜಯಿಸಿಕೊಂಡು ಬಾ, ಮಹಾರಾಜನ ತರಹ ಆಗ್ತೀಯಾ ಎಂದು ಸಂತೋಷ್‌ಗೆ ತಾಯಿ ಮನವಿ ಮಾಡಿದ್ದಾರೆ. ಬಿಗ್ ಬಾಸ್ ಆಟನೇ ಬೇಡ, ಮನೆಯಿಂದ ಹೊರಹೋಗ್ತೀನಿ ಎಂದು ಪಟ್ಟು ಹಿಡಿದಿದ್ದ ಸಂತೋಷ್‌ಗೆ ತಾಯಿ ಬುದ್ಧಿ ವಾದ ಹೇಳಿದ ಮೇಲೆ ಮನಸ್ಸು ಬದಲಿಸಿದ್ದಾರೆ. ಆಟ ಆಡೋಕೆ ಅಖಾಡಕ್ಕೆ ಇಳಿದಿದ್ದಾರೆ.

Share This Article