ವಧು ವರರಂತೆ ಕಾಣಿಸಿಕೊಂಡ ಸಮಂತಾ- ವಿಜಯ್ ದೇವರಕೊಂಡ

Public TV
2 Min Read

ಟಾಲಿವುಡ್ ನಟಿ ಸಮಂತಾ- ವಿಜಯ್ ದೇವರಕೊಂಡ (Vijay Devarakonda) ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ವಧು- ವರರಂತೆ ಸ್ಯಾಮ್- ವಿಜಯ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿ ದೇವಸ್ಥಾನದಲ್ಲಿ ಹೋಮ- ಹವನ ಮಾಡಿಸುತ್ತಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಆ್ಯಪಲ್ ಬ್ಯೂಟಿ ಸಮಂತಾ ಸದ್ಯ ‘ಖುಷಿ’ (Kushi Film) ಸಿನಿಮಾದದಲ್ಲಿ ವಿಜಯ್ ಜೊತೆಯಾಗಿ ನಟಿಸುತ್ತಿದ್ದಾರೆ. ಆಗಾಗ ಇಬ್ಬರ ಕ್ಲೋಸಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿರುತ್ತದೆ. ಇದೀಗ ಮತ್ತೆ ಮಧು ಮಕ್ಕಳಂತೆ ಸ್ಯಾಮ್-ವಿಜಯ್ ಕಾಣಿಸಿಕೊಂಡಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಇದೆ ನಂಟು: ತಲೆಕೆಡಿಸಿಕೊಂಡ ಫ್ಯಾನ್ಸ್

ಸದ್ಯಕ್ಕೆ ‘ಖುಷಿ’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಇದರ ಅಂಗವಾಗಿ ದೇವಸ್ಥಾನದಲ್ಲಿ ಯಾಗದ ದೃಶ್ಯವನ್ನು ಚಿತ್ರೀಕರಿಸಲಾಯಿತು. ಈ ಸೀನ್‌ನಲ್ಲಿ ಸೀರೆಯಲ್ಲಿ ಸಮಂತಾ, ಪಂಚೆಯಲ್ಲಿ ವಿಜಯ್ ದೇವರಕೊಂಡ ನವ ವಿವಾಹಿತ ಜೋಡಿಯಾಗಿ ಕಾಣಿಸಿಕೊಂಡರು. ದೇವಸ್ಥಾನದಲ್ಲಿ ಕುಟುಂಬಸ್ಥರ ಜೊತೆ ವಿಜಯ್-ಸಮಂತಾ ಪೂಜೆ ಮಾಡಿಸಿದ್ದಾರೆ. ಇಬ್ಬರ ವಿಡಿಯೋ ಸದ್ಯ ಸಖತ್ ಸದ್ದು ಮಾಡುತ್ತಿದೆ.

‘ಖುಷಿ’ ಸಿನಿಮಾದಲ್ಲಿ ಸಮಂತಾ(Samantha) ಮುಸ್ಲಿಂ ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಲವರ್ ಬಾಯ್ ಲುಕ್‌ನಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 1ಕ್ಕೆ ‘ಖುಷಿ’ ಸಿನಿಮಾ ತೆರೆಗೆ ಬರಲಿದೆ. ಸ್ಯಾಮ್- ವಿಜಯ್ ಕೆಮಿಸ್ಟ್ರಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಕಾದುನೋಡಬೇಕಿದೆ.

ಸಮಂತಾ ಅವರು ಸದ್ಯಕ್ಕೆ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಅವರಿಗಿರುವ ಅನಾರೋಗ್ಯ. ಆಟೋಇಮ್ಯೂನ್ ಎನ್ನುವ ಅಪರೂಪದ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದಾರೆ. ಕಳೆದ ವರ್ಷದಿಂದ ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುವಾಗಲೂ ಅವರು ಚಿತ್ರರಂಗದಿಂದ ದೂರವಿದ್ದರು. ಇದೀಗ ಹೆಚ್ಚುವರಿಯಾಗಿ ಮತ್ತೆ ಅವರು ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ. ಈ ಕಾಯಿಲೆಗೆ ಹೆಚ್ಚು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲು ಸಮಂತಾ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್