2ನೇ ಮದುವೆ ಬಗ್ಗೆ ಮಾತಾಡಿದ ನಟಿ ಸಮಂತಾ

Public TV
1 Min Read

ಕ್ಷಿಣದ ಖ್ಯಾತನಟಿ ಸಮಂತಾ (Samantha) ಮದುವೆ ಕುರಿತಾಗಿ ಸಾಕಷ್ಟು ಸುದ್ದಿಗಳು ಚಿತ್ರೋದ್ಯಮದಲ್ಲಿ ಗಿರಕಿ ಹೊಡೆದಿವೆ. ಸಮಂತಾ ಎರಡನೇ ಮದುವೆ ಆಗುತ್ತಿದ್ದಾರೆ ಅಂತೆಲ್ಲ ಸದ್ದು ಮಾಡಿವೆ. ಡಿವೋರ್ಸ್ (Divorce)   ನಂತರ ಸಮಂತಾ ಮದುವೆ (Marriage) ಯೋಚನೆಯನ್ನು ಮಾಡಿದ್ದಾರೆ ಎಂದೂ ಸುದ್ದಿ ಆಗಿದೆ. ಈ ಕುರಿತು ಸಮಂತಾ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. 2ನೇ ಮದುವೆ ಕುರಿತಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಡಿವೋರ್ಸ್ ನಂತರ ಯಾವುದೇ ಕಾರಣಕ್ಕೂ ಅವರು ಮದುವೆ ಬಗ್ಗೆ ಯೋಚನೆ ಮಾಡಿಲ್ಲವಂತೆ. ಎರಡನೇ ಮದುವೆ ಆಗೋದು ತಮ್ಮ ಪ್ರಕಾರ ವೇಸ್ಟ್ ಅಂತೆ. ಆ ಮದುವೆಯೂ ಮುರಿದು ಬೀಳೋಲ್ಲ ಅನ್ನೋದು ಏನು ಗ್ಯಾರಂಟಿ ಎನ್ನುವ ಸಮಂತಾ. ತಮಗೆ ಎರಡನೇ ಮದುವೆಯಲ್ಲೇ ಆಸಕ್ತಿ ಇಲ್ಲವೆಂದು ಹೇಳಿಕೊಂಡಿದ್ದಾರೆ.

 

ಅಭಿಮಾನಿಗಳು ಮತ್ತು ಮಾಧ್ಯಮದವರು ಪದೇ ಪದೇ 2ನೇ ಮದುವೆ ಕುರಿತಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಇಬ್ಬರಿಗೂ ಒಂದೇ ಮಾತಿನ ಮೂಲಕ ಉತ್ತರ ನೀಡಿದ್ದಾರೆ. ತಮಗೆ ಮದುವೆ ಕುರಿತಾಗಿ ಯಾವುದೇ ಆಸಕ್ತಿ ಉಳಿದಿಲ್ಲವೆಂದು ಅವರು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

Share This Article