ಸಂಭಾವನೆಗಾಗಿ ಎಂದೂ ಬೇಡಬಾರದು: ನಟಿ ಸಮಂತಾ

Public TV
1 Min Read

ಸೌತ್ ನಟಿ ಸಮಂತಾ (Samantha) ಸದ್ಯ Shakuntalam ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. `ಯಶೋದ’ (Yashoda) ಸೂಪರ್ ಸಕ್ಸಸ್ ಬಳಿಕ ಶಾಕುಂತಲೆಯಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ನಡುವೆ ನಟಿಯರ ಸಂಭಾವನೆ ವಿಚಾರವಾಗಿ ಮೌನ ಮುರಿದಿದ್ದಾರೆ. ಇದನ್ನೂ ಓದಿ: ʻಪಡ್ಡೆಹುಲಿʼ ಶ್ರೇಯಸ್‌ಗೆ ಪ್ರಿಯಾಂಕಾ ಕುಮಾರ್‌ ನಾಯಕಿ

ನಾಗಚೈತನ್ಯ (Nagachaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ವೃತ್ತಿ ಜೀವನದತ್ತ (Films) ನಟಿ ಮುಖ ಮಾಡಿದ್ದಾರೆ. ಮರಸುತ್ತುವ ಪಾತ್ರಗಳಿಗೆ ನೋ ಎನ್ನುತ್ತಾ ನಟನೆಗೆ ಸ್ಕೋಪ್ ಇರುವ ಪಾತ್ರಗಳಿಗೆ ಸಮಂತಾ ಅಭಿನಯಿಸುತ್ತಿದ್ದಾರೆ. ಇನ್ನೂ ಚಿತ್ರರಂಗದಲ್ಲಿ ನಟ-ನಟಿಯರಿಗೆ ಸಂಭಾವನೆ ಬಹಳಷ್ಟು ವ್ಯತ್ಯಾಸವಿದೆ. ನಟರಿಗೆ ಕೊಡುವಷ್ಟು ಸಂಭಾವನೆ ನಾಯಕಿಯರಿಗೆ ಕೊಡಲ್ಲ ಎಂಬ ಧೋರಣೆ ಕೂಡಯಿದೆ. ಈ ಬಗ್ಗೆ ಸ್ಯಾಮ್ ಮಾತನಾಡಿದ್ದಾರೆ.

ಹೆಚ್ಚಿನ ಸಂಭಾವನೆ ಪಡೆಯಲು ನಾನು ಹೋರಾಡುತ್ತಿದ್ದೇನೆ. ಹಾಗಂತ, ಹೀರೋಗಳಷ್ಟೇ ಸಂಭಾವನೆ ಪಡೆಯುತ್ತೇನೆ ಎಂದಲ್ಲ. ನಿರ್ಮಾಪಕರೇ ಬಂದು ಹೌದು, ನಾವು ನಿಮಗೆ ಇಷ್ಟು ಪಾವತಿಸಲು ಬಯಸುತ್ತೇವೆ ಎಂದು ಹೇಳಬೇಕು. ಅದಕ್ಕಾಗಿ ನಾನು ಬೇಡಬೇಕಾಗಿಲ್ಲ. ಆದರೆ, ಇದಕ್ಕೆ ಪರಿಶ್ರಮ ಬೇಕು ಎಂದಿದ್ದಾರೆ ಸಮಂತಾ.

ಸಮಂತಾ, ರಶ್ಮಿಕಾ, ನಯನತಾರಾ ಚಿತ್ರರಂಗದಲ್ಲಿ ಒಂದೊಳ್ಳೆ ಸಂಭಾವನೆ ಪಡೆಯುತ್ತಿದ್ದಾರೆ. ಅದು ಅವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಸಿನಿಪಂಡಿತರ ಅಭಿಪ್ರಾಯ.

Share This Article