ಸಮಂತಾ ಬ್ಯಾಕ್ ಟು ಶೂಟ್- ಹೊಸ ಲುಕ್‌ನಲ್ಲಿ ಕಂಗೊಳಿಸಿದ ನಟಿ

Public TV
2 Min Read

ಪ್ರವಾಸ ಮತ್ತು ಚಿಕಿತ್ಸೆ ಎಂದು ದೇಶ ವಿದೇಶ ಸುತ್ತುತ್ತಿದ್ದ ಸಮಂತಾ (Samantha) ಕೊನೆಗೂ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ. ಸಮಂತಾಗೆ ಮನಸಿತ್ತೋ ಇಲ್ವೋ ಒಂದರ್ಥದಲ್ಲಿ ಜಾಲತಾಣದಲ್ಲಿ ಟೀಕೆಗಳೇ ಸಮಂತಾರನ್ನ ಇವತ್ತು ಕ್ಯಾಮೆರಾ ಮುಂದೆ ಕೂರಿಸಿದೆ. ಸ್ಯಾಮ್ ನಯಾ ಗೆಟಪ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ.

6 ತಿಂಗಳು ಬಣ್ಣ ಹಚ್ಚಲ್ಲ ಎಂದು ಹೇಳಿ ಹೊರಟ ಸ್ಯಾಮ್ ಮಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ರು. ಸ್ನೇಹಿತೆ ಜೊತೆ ಬಾಲಿ(Baali) ಟ್ರಿಪ್ ಎಂಜಾಯ್ ಮಾಡಿಬಂದ್ರು. ದೇಶ ವಿದೇಶ ಸುತ್ತುತ್ತಿದ್ರು. ದೇವಸ್ಥಾನ-ಧ್ಯಾನ ಎಂದೆಲ್ಲಾ ಸಮಯ ಕಳೆದ್ರು. ಕೊನೆಗೂ ಆಗಸ್ಟ್ 15ರಿಂದ ಬಣ್ಣ ಹಚ್ಚಿದ್ದಾರೆ. ಶ್ವೇತಬಣ್ಣದ ಜಂಪ್‌ಸೂಟ್‌ನಲ್ಲಿ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ವಿವಿಧ ಬಗೆಯ ಹರಳುಗಳಿಂದ ಮಾಡಿದ ಸುಂದರವಾದ ನೆಕ್ಲೇಸ್ ಧರಿಸಿರುವ ಸ್ಯಾಮ್ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ. ಅಷ್ಟೇ ಅಲ್ಲ, ಬ್ಲ್ಯಾಕ್ & ವೈಟ್ ಡ್ರೆಸ್‌ಗೆ ಕೂಲಿಂಗ್ ಗ್ಲಾಸ್ ಧರಿಸಿ ಸಮಂತಾ ಮಿಂಚಿದ್ದಾರೆ. ಸಮಂತಾರ ಎರಡು ಬಗೆಯ ಫೋಟೋಶೂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.‌ ಇದನ್ನೂ ಓದಿ:ಇಂದು ಸ್ಪಂದನಾ ಉತ್ತರಕ್ರಿಯೆ ವಿಧಿವಿಧಾನ

ಆರು ತಿಂಗಳು ಬಣ್ಣ ಹಚ್ಚೋಲ್ಲ ಎಂದಿದ್ದ ಸಮಂತಾ(Samantha)  ಈಗ ಕ್ಯಾಮೆರಾ ಎದುರಲ್ಲಿ ಕಾಣಿಸ್ಕೊಂಡಿರೋದು ಹೊಸ ಸಿನಿಮಾಕ್ಕಲ್ಲ. ಬದಲಿಗೆ ತಳ್ಳಿಕೊಂಡು ನಟಿಸಿದ್ದ ಸಿನಿಮಾಕ್ಕಾಗಿ. ಆ ಸಿನಿಮಾವೇ ಖುಷಿ. ವಿಜಯ್ ದೇವರಕೊಂಡ (Vijay Devarakonda) ಜೊತೆ ಅಭಿನಯಿಸಿರುವ ಖುಷಿ (Kushi) ಚಿತ್ರ. ಮೊನ್ನೆ ಮೊನ್ನೆ ತಾವೇ ಹೈದ್ರಾಬಾದ್‌ನಲ್ಲಿ ಖುಷಿ ಟ್ರೈಲರ್ ರಿಲೀಸ್ ಇವೆಂಟ್ ನಡೆದಿತ್ತು. ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಮಂತಾ ಗೈರಾಗಿದ್ರು.

ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಕಾರಣ ಕೊಟ್ಟು ಪ್ರಚಾರದಿಂದ ತಪ್ಪಿಸಿಕೊಂಡಿದ್ರು. ಇದೇ ಆಗಿದ್ದು ಎಡವಟ್ಟು. ಸಮಂತಾಗೆ ಪ್ರವಾಸ ಮೋಜು ಮಸ್ತಿ ಎಂದು ದೇಶವಿದೇಶ ಸುತ್ತೋದಕ್ಕೆ ಆಗುತ್ತೆ. ಪ್ರಚಾರಕ್ಕೆ ಬರೋದಕ್ಕಾಗಲ್ವೇ ಅನ್ನೋ ಟೀಕೆ ಕೇಳಿಬಂತು. ಈ ವಿಷಯ ಸಮಂತಾ ಕಿವಿಗೂ ಬಡಿದಂತೆ ಕಾಣುತ್ತದೆ. ಟೀಕೆ ಹೆಚ್ಚಾಗೋ ಮೊದಲೇ ಎಚ್ಚೆತ್ತುಕೊಂಡ ಸಮಂತಾ ಮರುದಿನವೇ ಕಾಸ್ಟ್ಯೂಮ್ ಡಿಸೈನರ್ ಕರೆಸಿ ಹಲವು ವಸ್ತ್ರಗಳನ್ನು ರೆಡಿ ಮಾಡಿಸಿಕೊಂಡು ಖುಷಿ ಸಿನಿಮಾದ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ವಿಜಯ್ ದೇವರಕೊಂಡ ಜೊತೆ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್