ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ಹಾರಿದ್ರಾ ನಟಿ- ಏನಾಯ್ತು ಸಮಂತಾಗೆ?

Public TV
2 Min Read

ಮೊನ್ನೆಯಷ್ಟೇ ‘ಖುಷಿ’ (Kushi) ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijaya Devarakonda) ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದರು. ಈಗ ಸಮಂತಾ (Samantha) ಏಕಾಏಕಿ ವಿಮಾನ ಏರಿದ್ದಾರೆ. ಮೂರು ನಾಲ್ಕು ತಿಂಗಳು ಸ್ಯಾಮ್ ಭಾರತದಿಂದ ನಾಪತ್ತೆ. ಆರೋಗ್ಯಕ್ಕಾಗಿ ಮತ್ತೆ ಚಿಕಿತ್ಸೆಗೆ ಅಮೆರಿಕಾಗೆ ಹಾರಿದ್ರಾ ಸಮಂತಾ? ಇಲ್ಲಿದೆ ಮಾಹಿತಿ.

ಮೊನ್ನೆ ಮೊನ್ನೆ ತಾನೇ ಖುಷಿ (Kushi) ಸಿನಿಮಾ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ (Vijay Devarakonda) ಜೊತೆ ಭರ್ಜರಿಯಾಗಿ ಕುಣಿದಿದ್ದರು. ಒಂದಲ್ಲ ಎರಡಲ್ಲ ಮೂರು ಮೂರು ಬಾರಿ ವೆರೈಟಿ ಡ್ರೆಸ್‌ಗಳಲ್ಲಿ ಬೆಂಕಿ ಹಚ್ಚಿದ್ದರು. ಮಯೋಸಿಟೀಸ್ ಖಾಯಿಲೆ ಮರೆತು ಜನರು ಕೇಕೆ ಹಾಕುವಂತೆ ಮಾಡಿದ್ದರು. ನೋವನ್ನು ಒಳಗಿಟ್ಟುಕೊಂಡು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅಭಿಮಾನಿಗಳಿಗೆ ಐ ಟು ಲವ್ ಯೂ ನಿಮಗಾಗಿ ಸಿನಿಮಾ ಮಾಡ್ತೀನಿ. ನಟಿಸುತ್ತೀನಿ ಅಂತಾ ಫ್ಯಾನ್ಸ್‌ಗೆ ಪ್ರಾಮೀಸ್ ಮಾಡಿದ್ದರು. ವೇದಿಕೆಯ ಮೇಲೆ ಅಭಿಮಾನಿಗಳ ಪ್ರೀತಿ ನೋಡಿ ಭಾವುಕರಾದರು.‌ ಇದನ್ನೂ ಓದಿ:ಕಾಲಿವುಡ್‌ನ ಈ ಹೀರೋ ಜೊತೆ ನಟಿಸುವಾಸೆ ಎಂದ ಶಿವಣ್ಣ

ಒಂದು ವರ್ಷ ಯಾವುದೇ ಸಿನಿಮಾ ಮಾಡಲ್ಲ ಎಂದು ಘೋಷಿಸಿದ್ದು ಗೊತ್ತು. ಅದಾದ ಮೇಲೆ ಯೋಗ, ಧ್ಯಾನದ ಮೊರೆ ಹೋದರು. ಕೆಲ ದಿನಗಳ ಹಿಂದೆ ಬಾಲಿ ದ್ವೀಪದಲ್ಲಿ ಬೀಡು ಬಿಟ್ಟಿದ್ದರು. ಇನ್ಯಾವಾಗ ಸಮಂತಾ ದರ್ಶನ ಅಂತಾ ಕಾಯುವ ಸಮಯದಲ್ಲಿ ಖುಷಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿ ಅಚ್ಚರಿ ಮೂಡಿಸಿದ್ದರು. ಈಗ ಸಿನಿಮಾ ಬಿಡುಗಡೆ ಮುನ್ನವೇ ಮತ್ತೆ ಫ್ಲೈಟ್ ಹತ್ತಿದ್ದಾರೆ. ಅವರು ನೇರವಾಗಿ ಅಮೆರಿಕಾಗೆ (America)  ಪ್ರಯಾಣ ಬೆಳೆಸಿದ್ದಾರೆ. ಇನ್ನು ಮೂರು ನಾಲ್ಕು ತಿಂಗಳು ನಾಟ್ ರೀಚೇಬಲ್ ಆಗಿರುತ್ತಾರಂತೆ.

ಮಯೋಸಿಟೀಸ್ ಚಿಕಿತ್ಸೆಗಾಗಿಯೇ ಅಮೆರಿಕಾಗೆ ಹೋಗಿದ್ದು ಸತ್ಯ. ಮೂರು ನಾಲ್ಕು ತಿಂಗಳು ಅಲ್ಲೇ ಇರಲಿದ್ದಾರಾ ಅಥವಾ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರಾ? ಸದ್ಯಕ್ಕೆ ಅದರ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಒಟ್ನಲ್ಲಿ ಸಮಂತಾ ಸಂಕಟ ನೋಡಿ ಅಭಿಮಾನಿಗಳು ಕೂಡ ಬೇಸರ ಹೊರಹಾಕಿದ್ದಾರೆ. ಸ್ಯಾಮ್‌ಗೆ ಏನಾಗ್ತಿದೆ ಅಂತಾ ತಲೆ ಕೆಡಿಸಿಕೊಂಡಿದ್ದಾರೆ. ಅದೇನೇ ಇರಲಿ ಸಮಂತಾ ಗುಣಮುಖರಾಗಿ ಬರಲಿ ಎಂಬುದೇ ಅಭಿಮಾನಿಗಳ ಆಶಯ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್