ಸಮಂತಾ ಫ್ಲಾಪ್‌ ಕ್ವೀನ್‌, ಆಕೆಗೆ ಮಾರ್ಕೆಟ್‌ ಇಲ್ಲ- ವಿಮರ್ಶಕನ ವಿವಾದಾತ್ಮಕ ಟ್ವೀಟ್‌

Public TV
2 Min Read

ಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ‘ಶಾಕುಂತಲಂ’ (Shakuntalam) ಸಿನಿಮಾ ಏ.14ರಂದು ರಿಲೀಸ್ ಆಗಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮಂತಾ (Samantha) ನಟನೆಯ ಈ ಸಿನಿಮಾ ಹೇಳಿಕೊಳ್ಳುವಂತಹ ಕಲೆಕ್ಷನ್ ಏನು ಮಾಡಿಲ್ಲ. ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸದ್ದು ಮಾಡುವ ವಿಮರ್ಶಕ ಉಮೈರ್ ಸಂಧು ಇದೀಗ ಸಮಂತಾ ಸಿನಿಮಾ ಬಗ್ಗೆ ಕಿಡಿಕಾರಿದ್ದಾರೆ. ಸಮಂತಾ ‘ಫ್ಲಾಪ್ ಕ್ವೀನ್’ ಎಂದು ಟ್ವೀಟ್ ಮಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಇದನ್ನೂ ಓದಿ:ಸೂರ್ಯನಿಗೆ ನಾಯಕಿಯಾದ ಬಾಲಿವುಡ್ ನಟಿ ದಿಶಾ ಪಟಾನಿ

‘ಪುಷ್ಪ’ (Pushpa) ಬ್ಯೂಟಿ ಸಮಂತಾ, ‘ಯಶೋದ’ (Yashoda) ಸೂಪರ್ ಸಕ್ಸಸ್ ನಂತರ ‘ಶಾಕುಂತಲಂ’ (Shakuntalam) ಚಿತ್ರದ ಮೂಲಕ ಶಾಕುಂತಲೆಯಾಗಿ ಬಂದರು. ಆದರೆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ವಿಷ್ಯದಲ್ಲಿ ಸೋತಿದೆ. ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಬಗ್ಗೆ ಕಾಮೆಂಟ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಈಗ ಸಮಂತಾ ವಿರುದ್ಧವು ಟ್ವೀಟ್ ಮಾಡಿದ್ದು, ಫ್ಲಾಪ್ ಕ್ವೀನ್ ಎಂದು ಬರೆದುಕೊಂಡಿದ್ದಾರೆ.

ಸಮಂತಾ, ಕೆರಿಯರ್- ಕ್ರೇಜ್ ಮುಗಿದ ಅಧ್ಯಾಯ. ಇವರ ಸೋಲೋ ಹಾಗೂ ಅತೀ ದೊಡ್ಡ ರಿಲೀಸ್ ‘ಶಾಕುಂತಲ’ ಮೊದಲ ದಿನ ವಿಶ್ವದಾದ್ಯಂತ ದುರಂತ ಕಂಡಿದೆ. ಸಮಂತಾ ಒಬ್ಬರು ಫ್ಲಾಪ್ ಕ್ವೀನ್. ನಿರ್ಮಾಪಕರಿಗೆ ಸಿಕ್ಕಾಪಟ್ಟೆ ಹಣ ನಷ್ಟ ಆಗಿದೆ. ಮೊದಲ ದಿನದ ಕಲೆಕ್ಷನ್ ನಾಚಿಕೆಗೇಡು ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್ ಈಗ ವೈರಲ್ ಆಗಿದೆ. ಇದರ ಹಿಂದೇನೆ ಇನ್ನೊಂದು ಟ್ವೀಟ್ ಮಾಡಿದ್ದಾರೆ.

ಮೊದಲ ಟ್ವೀಟ್ ಸಿನಿಮಾ ರಿಲೀಸ್ ಆದ ದಿನ ಮಾಡಿದ್ದರು. ಏಪ್ರಿಲ್ 16ರಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ‘ಶಾಕುಂತಲಂʼ ಸಿನಿಮಾದ ಸೋಲಿನ ಬಳಿಕ ಸಮಂತಾ ಖಿನ್ನತೆಗೆ ಜಾರಿದ್ದಾರೆ. ನಿನ್ನೆಯಿಂದ ಸಮಂತಾ ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರ ಬ್ರ‍್ಯಾಂಡ್ ಹಾಗೂ ಮಾರ್ಕೆಟ್ ಬೆಲೆ ಒಂದು ದಿನದಲ್ಲೇ ಕಡಿಮೆಯಾಗಿದೆ ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಉಮೈರ್ ಸಂಧು ಟ್ವೀಟ್‌ಗೆ ಸಮಂತಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನೆಚ್ಚಿನ ನಟಿ ಸಮಂತಾ ಬಗ್ಗೆ ಉಮೈರ್‌ ಸಂಧು (Umair Sandhu) ಟ್ವೀಟ್‌ ಮಾಡಿದ ರೀತಿಗೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವಿಮರ್ಶಕನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

Share This Article