ಶಿವನ ಧ್ಯಾನದಲ್ಲಿ ಮುಳುಗಿದ ಸಮಂತಾ

Public TV
1 Min Read

ಸೌತ್ ನಟಿ ಸಮಂತಾ (Samantha) ಅವರು ಮಯೋಸಿಟಿಸ್ (Myositis) ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಒಪ್ಪಿಕೊಂಡಿರುವ ಸಿನಿಮಾ, ವೆಬ್ ಸೀರಿಸ್ ಎಲ್ಲಾ ಮುಗಿಸಿಕೊಟ್ಟಿದ್ದಾರೆ. ಆರೋಗ್ಯದ ಕಡೆ ಗಮನ ಕೊಡೋದಕ್ಕಾಗಿಯೇ ವೃತ್ತಿ ಜೀವನಕ್ಕೆ ಒಂದು ವರ್ಷ ಬ್ರೇಕ್ ಕೊಟ್ಟಿದ್ದಾರೆ. ಹೀಗಿರುವಾಗ ಇಶಾ ಫೌಂಡೇಶನ್ (Isha Foundation) ಆದಿಯೋಗಿಗೆ (Adiyogi) ಭೇಟಿ ನೀಡಿದ್ದಾರೆ. ಅಲ್ಲಿ ಧ್ಯಾನ ಮಾಡಿ, ದಿನ ಕಳೆಯುತ್ತಿರುವ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ.

ಸಮಂತಾ ಅವರು ಸಿಟಾಡೆಲ್, ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ (Kushi) ಸಿನಿಮಾವನ್ನು ಮುಗಿಸಿಕೊಟ್ಟಿದ್ದಾರೆ. ಎರಡು ಪ್ರಾಜೆಕ್ಟ್‌ನಲ್ಲೂ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್, ಅನಾರೋಗ್ಯದ ಸಮಸ್ಯೆ ಇರೋದ್ರಿಂದ ಇದೆಲ್ಲದರಿಂದ ಅವರಿಗೆ ಬಿಡುವು ಬೇಕಾಗಿದೆ. ಆರೋಗ್ಯ ಮತ್ತು ಮನಸ್ಸಿಗೆ ರಿಲಾಕ್ಸೇಷನ್ ಬೇಕಾಗಿದೆ. ಹಾಗಾಗಿ ಸದ್ಗುರು ಸಂಘಕ್ಕೆ ಸಮಂತಾ ಸೇರಿದ್ದಾರೆ. ಇದನ್ನೂ ಓದಿ:‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಕಥೆ ಕೊಟ್ಟಿದ್ದು ಒಬ್ಬ ಸೂಪರ್ ಸ್ಟಾರ್

ಸದ್ಗುರುವಿನ(Sadguru) ಅನುಯಾಯಿ ಆಗಿರುವ ಸಮಂತಾ, ಕೊಯಮತ್ತೂರಿನಲ್ಲಿ ಸದ್ಗುರು ಸ್ಥಾಪಿಸಿರುವ ಇಶಾ ಸೆಂಟರ್ ಸೇರಿಕೊಂಡಿದ್ದು ಅಲ್ಲಿ, ಸದ್ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನ, ಪೂಜೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಸುಂದರವಾದ ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ.

ಇತರ ಭಕ್ತಾಧಿಗಳ ಜೊತೆಗೆ ನೆಲಹಾಸಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ತಮ್ಮ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೆಲವು ಹೊತ್ತಿಗೆ ಮುಂಚೆ ಏನಾದರೂ ತಿರುವುತ್ತಾ, ಮುರಿಯುತ್ತಾ, ಮೈಯಿ ಕೆರೆಯುತ್ತಾ, ಯೋಚನೆಗಳ ಪ್ರವಾಹಗಳಲ್ಲಿ ಇರುತ್ತಿದ್ದೆ. ಇವುಗಳನ್ನು ಮಾಡದೆ ಸುಮ್ಮನೆ ಕೂರುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೆ. ಆದರೆ ಇಂದು ಸತತವಾಗಿ ಧ್ಯಾನಮಗ್ನಳಾಗಿದ್ದೆ. ಧ್ಯಾನ ನನ್ನ ಶಕ್ತಿ ಎಂದು ಅರಿತುಕೊಂಡೆ. ಧ್ಯಾನ ನನ್ನ ಸಂವಹನ, ನನಗೆ ಸ್ಪಷ್ಟನೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಇಷ್ಟು ಸರಳವಾದ ಕಾರ್ಯವೊಂದರಲ್ಲಿ ಇಷ್ಟು ಶಕ್ತಿ ಅಡಗಿರುತ್ತದೆ ಎಂದು ತಿಳಿದಿರಲಿಲ್ಲ ಎಂದು ಸಮಂತಾ ಬರೆದುಕೊಂಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್