ಮತ್ತೆ ಸಿನಿಮಾ ತಯಾರಿಯಲ್ಲಿ ಸಮಂತಾ- ಫ್ಯಾನ್ಸ್‌ಗೆ ಗುಡ್ ನ್ಯೂಸ್

Public TV
1 Min Read

ಮಂತಾ (Samantha) ಮತ್ತೆ ಸುದ್ದಿಯಲ್ಲಿದ್ದಾರೆ. ಸ್ಯಾಮ್ ಮತ್ತೆ ಸಿನಿಮಾ ಮಾಡಲು ರೆಡಿಯಾಗ್ತಿದ್ದಾರೆ ಅಂತ ಫ್ಯಾನ್ಸ್ ಫುಲ್ ಖುಷಿಯಲ್ಲಿದ್ದಾರೆ. ಇದು ನಮ್ಮ ಸಮಂತಾ ಅಂತ ಸ್ಮೈಲ್ ಕೊಡ್ತಿದ್ದಾರೆ. ಫ್ಯಾನ್ಸ್ ಖುಷಿಗೆ ಕಾರಣ ಏನು? ಅಸಲಿಗೆ ಸಿನಿಮಾ ಒಪ್ಪಿಕೊಂಡ್ರಾ ಸಮಂತಾ? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಆರೋಗ್ಯದ ಸಮಸ್ಯೆಯಿಂದ ನಟಿ ಸಮಂತಾ ಕೆಲವು ತಿಂಗಳುಗಳಿಂದ ಸಿನಿಮಾಗಳಿಗೆ ಬ್ರೇಕ್ ಹಾಕಿದ್ದರು. ಏರ್‌ಪೋರ್ಟ್‌ನಲ್ಲಿ ಪೋಸ್ ಕೊಟ್ಟಿದ್ದ ಒಂದು ಫೋಟೋ ಹಾಕಿ ಅಭಿಮಾನಿಗಳಿಗೆ ಅಪ್‌ಡೇಟ್ ಕೊಟ್ಟಿದ್ದರು. ಐಸ್ ಬಾತ್‌ನಲ್ಲಿ ಕುಳಿತಿದ್ದ ಫೋಟೋ ಶೇರ್ ಮಾಡಿ ಹುಡುಗರು ನಡುಗುವಂತೆ ಸ್ಯಾಮ್ ಮಾಡಿದ್ದರು. ಸಿನಿಮಾ ಮಾಡಲಿ ಬಿಡಲಿ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಜೊತೆ ಸಮಂತಾ (Samantha) ಕನೆಕ್ಟ್ ಆಗಿರುತ್ತಿದ್ದರು. ಫ್ಯಾನ್ಸ್ ಕೂಡ ಈಕೆಯ ಪ್ರತಿಯೊಂದು ಅಪ್‌ಡೇಟ್ ನೋಡಿ ಖುಷಿ ಪಟ್ಟು, ಒಳ್ಳೆದಾಗಲಿ ಅಂತ ಒಂದು ರಾಶಿ ಕಾಮೆಂಟ್ ಬರೆಯುತ್ತಿದ್ದರು.

ಸದ್ಯ ಸಮಂತಾ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿವೆ. ಮಿರ ಮಿರ ಮಿಂಚ್ತಿರುವ ಬಟ್ಟೆಗಳಲ್ಲಿ ಸ್ಯಾಮ್‌ನ ನೋಡಿ ಇದು ನಮ್ಮ ಸ್ಯಾಮ್ ಅಂತ ಫ್ಯಾನ್ಸ್ ಸ್ವೀಟ್ ತಿಂತಿದ್ದಾರೆ. ಇದು ನಯಾ ಸಿನಿಮಾಗೆ ಸಮಂತಾ ತಯಾರಿ ಅಂತ ಕೆಲವು ಲೆಕ್ಕ ಹಾಕ್ತಿದ್ದಾರೆ. ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾಗೆ ಠಕ್ಕರ್- ತೆಲುಗಿನಲ್ಲಿ ರುಕ್ಮಿಣಿ ವಸಂತ್‌ಗೆ ಬಂಪರ್ ಆಫರ್

ಇನ್ನು ಮುಂದೆ ನಮ್ಮ ಸಮಂತಾ (Samantha) ಸಿನಿಮಾ ಮಾಡ್ತಾರೆ ಅಂತ ಹಲವರು ಹೇಳ್ತಿದ್ದಾರೆ. ಅದಕ್ಕಾಗಿ ಹೊಸ ಫೋಟೋಶೂಟ್‌ ಮಾಡಿಸಿ ಸಿನಿಮಾಗಾಗಿ ತೆರೆಮರೆಯ ಸದ್ಯ ಆರೋಗ್ಯ ಸರಿ ಆಯ್ತಲ್ಲ ಥ್ಯಾಂಕ್ಸ್ ದೇವರೇ ಅಂತ ಮತ್ತಷ್ಟು ಜನ ನಿಟ್ಟುಸಿರು ಬಿಡ್ತಿದ್ದಾರೆ. ಕೊನೆಗೂ ಸ್ಯಾಮ್ ಹೊಸ ಫೋಟೋಸ್ ಇಷ್ಟೆಲ್ಲಾ ಖುಷಿಗೆ ಕಾರಣವಾಗಿದೆ.

Share This Article