ಆಸ್ಟ್ರೇಲಿಯಾದಲ್ಲಿ ಸಮಂತಾ- ಪ್ರವಾಸದ ಫೋಟೋ ಹಂಚಿಕೊಂಡ ನಟಿ

Public TV
1 Min Read

ಸೌತ್ ಬ್ಯೂಟಿ ಸಮಂತಾ (Samantha) ಸಿನಿಮಾ ಕೆಲಸದ ನಡುವೆ ಇದೀಗ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ವಿದೇಶದಲ್ಲಿ ನಟಿ  ಕಾಲ ಕಳೆದಿದ್ದಾರೆ. ಅಲ್ಲಿನ ಸುಂದರ ಫೋಟೋಗಳನ್ನು ನಟಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಉದ್ಯಮಿ ಮಗಳೊಂದಿಗೆ ಪ್ರಭಾಸ್‌ ಮದುವೆ ವಿಚಾರ ಸುಳ್ಳು- ಆಪ್ತರಿಂದ ಸ್ಪಷ್ಟನೆ

ಸಮಂತಾ ಆಗಾಗ ಪ್ರವಾಸಕ್ಕೆ ತೆರಳುತ್ತಲೇ ಇರುತ್ತಾರೆ. ಇದೀಗ ಅವರು ಆಸ್ಟ್ರೇಲಿಯಾದಲ್ಲಿ ಜಾಲಿಯಾಗಿ ಕಾಲ ಕಳೆದಿರೋ ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ‘ಪ್ರಕೃತಿ, ಪ್ರಾಣಿಗಳು ಮತ್ತು ಗುಡ್ ವೈಬ್ಸ್’ ಎಂದು ನಟಿ ಬರೆದುಕೊಂಡಿದ್ದಾರೆ. ಕಾಂಗರೂಗಳಿಗೆ ಆಹಾರ ನೀಡುವುದರಿಂದ ಹಿಡಿದು ನಿದ್ದೆ ಮಾಡುವ ಕರಡಿ ಪ್ರಬೇಧಗಳನ್ನು ಗುರುತಿಸುವವರೆಗೂ ಸಂತೋಷದ ಸಮಯವಾಗಿತ್ತು ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ವೀಡಿಯೋ ಲೀಕ್ ಬಗ್ಗೆ ನಟಿ ಶೃತಿ ನಾರಾಯಣನ್ ಖಡಕ್ ರಿಯಾಕ್ಷನ್

 

View this post on Instagram

 

A post shared by Samantha (@samantharuthprabhuoffl)

ಇನ್ನೂ ಸಮಂತಾ ನಟನೆಯ ಜೊತೆ ಹೊಸ ಸಿನಿಮಾವನ್ನು ನಿರ್ಮಾಣ ಮಾಡುವತ್ತ ಬ್ಯುಸಿಯಾಗಿದ್ದಾರೆ. ‘ಶುಭಂ’ (Subham) ಚಿತ್ರವನ್ನು ಅವರು ನಿರ್ಮಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಕೆಲದಿನಗಳಿಂದ ನಿರ್ಮಾಪಕ ರಾಜ್ ನಿಡಿಮೋರು ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದುವರೆಗೂ ಈ ಬಗ್ಗೆ ನಟಿ ರಿಯಾಕ್ಟ್ ಮಾಡಿಲ್ಲ.

Share This Article