ಜಪಾನ್‌ನಲ್ಲಿ ಆಮೀರ್ ಖಾನ್ ಪುತ್ರನ ಜೊತೆ ಸಾಯಿ ಪಲ್ಲವಿ

By
1 Min Read

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ (Aamir Khan) ಪುತ್ರ ಜುನೈದ್ ಖಾನ್ (Junaid Khan) ಜೊತೆ ಜಪಾನ್‌ನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಒಟ್ಟಾಗಿರುವ ಜುನೈದ್- ಸಾಯಿ ಪಲ್ಲವಿ (Sai Pallavi)  ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಯುಗಳಗೀತೆ’ ನಟಿ ಸಿರಿ, ಮಧುಸೂದನ್

ಸೌತ್‌ನ ಕೆಂಪು ಗಲ್ಲದ ಸುಂದರಿ ಸಾಯಿ ಪಲ್ಲವಿ ಅವರು ದೂರದ ಜಪಾನ್‌ನಲ್ಲಿ ಜುನೈದ್ ಜೊತೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಜಪಾನ್‌ನಲ್ಲಿ ಸಾಯಿ ಪಲ್ಲವಿ ಟೀಮ್ ಬೀಡು ಬಿಟ್ಟಿದೆ. ಆಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರಲ್ಲಿ ಸೂಪರ್ ಮ್ಯಾನ್ ಚಾಯೆ ಕೂಡ ಕಂಡು ಬರುತ್ತಿದೆ. ಸಾಯಿ ಪಲ್ಲವಿ ಹಿಂದಿ ಚಿತ್ರರಂಗಕ್ಕೆ ನಾಯಕಿಯಾಗಿ ಅಧಿಕೃತವಾಗಿ ಕಾಲಿಡ್ತಿದ್ದಾರೆ.

ಕೆಲವು ತಿಂಗಳುಗಳಿಂದ ಆಮೀರ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಭಾರೀ ಸುದ್ದಿಯಾಗಿತ್ತು. ಆದರೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಈ ಹಿಂದೆಯೇ ಆಮೀರ್ ಪುತ್ರನಿಗೆ ಸಾಯಿ ಪಲ್ಲವಿ ನಾಯಕಿ ಎಂದು ಕೂಡ ಸಖತ್ ಸುದ್ದಿಯಾಗಿತ್ತು. ಇದೀಗ ವೈರಲ್ ಆಗಿರುವ ಫೋಟೋ ಮೂಲಕ ಗಾಸಿಪ್‌ಗೆ ತೆರೆಬಿದ್ದಿದೆ.

ಜುನೈದ್ ಖಾನ್‌ಗೆ ನಾಯಕಿಯಾಗುವ ಮೂಲಕ ಬಾಲಿವುಡ್‌ಗೆ ಸಾಯಿ ಪಲ್ಲವಿ ಪಾದಾರ್ಪಣೆ ಮಾಡಿದ್ದಾರೆ. ಸೌತ್‌ನಲ್ಲಿ ಗೆದ್ದ ಹಾಗೇ ಬಾಲಿವುಡ್‌ನಲ್ಲಿಯೂ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.

Share This Article