ಬಿಗ್ ಬಾಸ್‌ನಿಂದ ಒಂದೇ ದಿನಕ್ಕೆ ಎಲಿಮಿನೇಟ್ ಆದ ಸ್ಪರ್ಧಿ

Public TV
1 Min Read

ಬಿಗ್ ಬಾಸ್ ಕನ್ನಡ 11ಕ್ಕೆ (Bigg Boss Kannada 11) ಅದ್ಧೂರಿ ಚಾಲನೆ ಸಿಕ್ಕಿದೆ. 1 ವಾರ ಪೂರೈಸಿರೋ ಬಿಗ್ ಬಾಸ್ ಮನೆಯಿಂದ ಯಮುನಾ ಶ್ರೀನಿಧಿ (Yamuna Srinidhi) ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇನ್ನೂ ಕನ್ನಡದಂತೆಯೇ ಪರಭಾಷೆಗಳಲ್ಲಿಯೂ ಕೂಡ ಬಿಗ್ ಬಾಸ್ ಶೋ ಸದ್ದು ಮಾಡುತ್ತಿದೆ. ತಮಿಳಿನ ಬಿಗ್ ಬಾಸ್ ಸೀಸನ್ 8ಕ್ಕೆ ಅ.6ರಂದು ಚಾಲನೆ ನೀಡಲಾಗಿದ್ದು, ಶೋ ಶುರುವಾದ ಒಂದೇ ದಿನಕ್ಕೆ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದಾರೆ.

ವಿಜಯ್ ಸೇತುಪತಿ ನಿರೂಪಣೆಯ ಬಿಗ್ ಬಾಸ್ ಸೀಸನ್ 8ಕ್ಕೆ ಮೊದಲ ದಿನ ಬರೋಬ್ಬರಿ 18 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಹೋಗುವಾಗ ಎಲ್ಲರಿಗೂ ಒಂದೊಂದು ಟ್ರೋಫಿಯನ್ನು ವಿಜಯ್ ಕೊಟ್ಟು ಕಳಿಸಿದ್ದರು. ಮೊದಲ ದಿನವೇ ಮನೆಯ ಸದಸ್ಯರಿಗೆ ಕಠಿಣ ಟಾಸ್ಕ್ ಒಂದನ್ನು ನೀಡಲಾಯ್ತು. ಒಂದೇ ದಿನಕ್ಕೆ ಎಲ್ಲರೂ ಸೇರಿ ಒಬ್ಬರನ್ನು ನಾಮಿನೇಟ್ ಮಾಡಿ ಅವರನ್ನು ಮನೆಯಿಂದ ಹೊರಗೆ ಕಳಿಸಬೇಕು ಎಂದಿದ್ದರು.

 

View this post on Instagram

 

A post shared by Sachana Namidass (@sachana_official_)

ಅದರಂತೆ ಮನೆಯ ಕಿರಿಯ ಸ್ಪರ್ಧಿಯಾಗಿದ್ದ ಸಚಾನಾ ನಮಿದಾಸ್ (Sachana Namidass) ಅವರನ್ನು ಮನೆಯ ಇತರೆ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದರು. ಹಾಗಾಗಿ ಒಂದೇ ದಿನಕ್ಕೆ ಸಚಾನಾ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದು ಪ್ರೇಕ್ಷಕರಿಗೂ ಶಾಕ್ ಕೊಟ್ಟಿದೆ. ನಟಿಯನ್ನು ಬಿಗ್‌ ಬಾಸ್‌ಗೆ ಬಂದ ಒಂದೇ ದಿನಕ್ಕೆ ಎಲಿಮಿನೇಟ್ ಮಾಡೋದು ಎಷ್ಟು ಸರಿ ಎಂದು ವಾಹಿನಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಇನ್ನೂ ಸಚಾನಾ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರಲಿದ್ದಾರೆ ಎನ್ನಲಾಗಿದೆ. ಅಧಿಕೃತ ಮಾಹಿತಿಗೆ ಕಾದುನೋಡಬೇಕಿದೆ.

ಅಂದಹಾಗೆ, ಸಚಾನಾ ನಮಿದಾಸ್ ಅವರು ತಮಿಳಿನ ಸೂಪರ್ ಹಿಟ್ ಸಿನಿಮಾ ‘ಮಹಾರಾಜ’ (Maharaja) ಚಿತ್ರದಲ್ಲಿ ವಿಜಯ್ ಸೇತುಪತಿ (Vijay Sethupathi) ಮಗಳ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

Share This Article