ರುಕ್ಮಿಣಿ ವಸಂತ್‌ ಎಂಗೇಜ್‌ ಆಗಿದ್ದಾರಾ? ನಟಿ ಸ್ಪಷ್ಟನೆ

Public TV
1 Min Read

ಪ್ತ ಸಾಗರದಾಚೆ ಎಲ್ಲೋ, ಬಾನ ದಾರಿಯಲ್ಲಿ ಚಿತ್ರ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ಸದ್ಯ ಟ್ರೆಂಡ್‌ನಲ್ಲಿರುವ ನಾಯಕಿ. ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಡ್ಯುಯೇಟ್ ಹಾಡಿದ ಮೇಲೆ ರುಕ್ಮಿಣಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಟನೆ, ಮುದ್ದಾದ ನಗುವಿಗೆ ಫ್ಯಾನ್ಸ್ ಮನಸೋತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಯ್‌ಫ್ರೆಂಡ್ (Boyfriend) ಬಗ್ಗೆ ರುಕ್ಮಿಣಿ ವಸಂತ್‌ಗೆ ಪ್ರಶ್ನೆ ಕೇಳಲಾಗಿದೆ. ಈ ಬಗ್ಗೆ ನಟಿ ಕೂಡ ರಿಯಾಕ್ಟ್ ಮಾಡಿದ್ದಾರೆ.

ಓರ್ವ ಹುಡುಗನ ಜೊತೆಯಿರುವ ರುಕ್ಮಿಣಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇಬ್ಬರ ಸಂಭಾಷಣೆ‌ ಜೊತೆ ಫೋಟೋ ಸೇರಿಸಿ ಟ್ರೋಲ್ ಮಾಡಲಾಗಿತ್ತು. ಹಾಗಾಗಿ ರುಕ್ಮಿಣಿ ವಸಂತ್ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ನಿಜನಾ ಎಂಬ ಪ್ರಶ್ನೆಗೆ ‘ನೋ’ ಎಂಬ ಉತ್ತರ ನೀಡುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ದುನಿಯಾ ವಿಜಯ್ ಪುತ್ರಿಯರು

ವೈರಲ್ ಆದ ಫೋಟೋದಲ್ಲಿರುವುದು ನನ್ನ ಗೆಳೆಯ, ನಾನು ಇನ್ನೂ ಸಿಂಗಲ್ ಎಂದು ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗಕ್ಕೆ ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನಗಳ ಬಗ್ಗೆ ಜನ ಕೇರ್ ಮಾಡುತ್ತಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ. ಸುಳ್ಳು ಸುದ್ದಿಗಳು, ನೆಗೆಟಿವ್ ಕಾಮೆಂಟ್‌ಗಳು ಬೇಸರ ತರಿಸುತ್ತದೆ ಎಂದಿದ್ದಾರೆ.

ರಕ್ಷಿತ್ ನಟನೆ, ನಿರ್ಮಾಣದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರುಕ್ಮಿಣಿ ಅಭಿನಯಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಸಿನಿಮಾ ತೆಲುಗು ವರ್ಷನ್‌ನಲ್ಲಿ ಸೆ.22ರಂದು ತೆರೆ ಕಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿನಯದ ‘ಬಾನ ದಾರಿಯಲ್ಲಿ’ (Banadariyali)  ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್