Kantara Chapter 1: ರಿಷಬ್‌ ಶೆಟ್ಟಿಗೆ ನಾಯಕಿ ಯಾರು? ಹೊರಬಿತ್ತು ಅಚ್ಚರಿಯ ಹೆಸರು

Public TV
1 Min Read

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ಯ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಿನಿಮಾ ಅಂದರೆ ಅದು ರಿಷಬ್ ಶೆಟ್ಟಿ (Rishab Shetty) ನಟನೆಯ ಕಾಂತಾರ ಸಿನಿಮಾ. ಅದರಲ್ಲೂ ಈಗ ಕಾಂತಾರ ಪ್ರೀಕ್ವೆಲ್ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಸದ್ಯ ಈ ಚಿತ್ರದ ನಾಯಕಿ ಯಾರು? ಎಂಬ ಪ್ರಶ್ನೆ ಎದುರಾಗಿದೆ. ನಾಯಕಿಯ ಕುರಿತು ಅಚ್ಚರಿಯ ಹೆಸರು ಕೂಡ ಹೊರಬಿದ್ದಿದೆ.

‘ಕಾಂತಾರ’ ಪಾರ್ಟ್ 2ನಲ್ಲಿ ರಿಷಬ್ ಶೆಟ್ಟಿ ಅವರ ಸಿಂಗಾರ ಸಿರಿಯಾಗಿ ಸಪ್ತಮಿ ಗೌಡ (Sapthami Gowda) ಮೋಡಿ ಮಾಡಿದ್ದರು. ಇಬ್ಬರ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಕಾಂತಾರ ಕಂಟೆಂಟ್ ಜೊತೆಗೆ ರಿಷಬ್-ಸಪ್ತಮಿ ಜೋಡಿ ಕೂಡ ಗೆದ್ದಿತ್ತು. ಹಾಗಾಗಿ ಇದೀಗ ಸಹಜವಾಗಿ ಪ್ರೀಕ್ವೆಲ್ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ರಿಷಬ್‌ಗೆ ಜೊತೆಯಾಗೋ ಆ ನಾಯಕಿ ಯಾರು? ಎಂಬ ಪ್ರಶ್ನೆ ಮೂಡಿದೆ.

‘ಕಾಂತಾರ’ ಪ್ರೀಕ್ವೆಲ್‌ಗೆ ‘ಸಪ್ತಸಾಗರದಾಚೆ ಎಲ್ಲೋ’ ನಟಿ ರುಕ್ಮಿಣಿ ವಸಂತ್ (Rukmini Vasanth) ನಾಯಕಿಯಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕನ್ನಡ ಮತ್ತು ಸೌತ್‌ನಲ್ಲಿ ಮೋಡಿ ಮಾಡುತ್ತಿರುವ ಈ ಬೆಡಗಿಗೆ ‘ಕಾಂತಾರ’ ತಂಡ ಮಣೆ ಹಾಕಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇದನ್ನೂ ಓದಿ:ಪ್ರಮೋದ್, ಪೃಥ್ವಿ ಚಿತ್ರಕ್ಕೆ ಸಾಥ್ ನೀಡಿದ ಧ್ರುವ ಸರ್ಜಾ

ಅದಷ್ಟೇ ಅಲ್ಲ, ರುಕ್ಮಿಣಿ ವಸಂತ್ ಜೊತೆ ಸಪ್ತಮಿ ಗೌಡ, ಆಲಿಯಾ ಭಟ್, ಸಾಯಿ ಪಲ್ಲವಿ (Saipallavi) ಹೆಸರು ಕೂಡ ಕೇಳಿ ಬರುತ್ತಿದೆ. ಈ ನಾಲ್ವರಲ್ಲಿ ಯಾರಾದರೂ ಒಬ್ಬರು ‘ಕಾಂತಾರ’ ನಾಯಕಿ ಪಟ್ಟ ಗಿಟ್ಟಿಸಿಕೊಳ್ತಾರೆ. ಅದು ಯಾರು ಎಂಬುದನ್ನು ಕಾಂತಾರ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಹೇಳುವವರೆಗೂ ಕಾಯಬೇಕಿದೆ. ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸೋದು ಪಕ್ಕಾ ಅಂದ್ರಾ ನಟಿ ಕರೀನಾ

 

ಸದ್ಯ ಕನ್ನಡದ ನಟಿಯರೇ ಆಗಿರುವ ಸಪ್ತಮಿ ಮತ್ತು ರುಕ್ಮಿಣಿ ಮಧ್ಯೆ ಕೊಂಚ ಪೈಪೋಟಿ ಇದೆ. ಈಗ ಹರಿದಾಡುತ್ತಿರುವ ಸುದ್ದಿ ನಿಜನಾ ಅಂತ ಕಾಂತಾರ ತಂಡ ಅಫಿಷಿಯಲ್ ಅನೌನ್ಸ್ ಮಾಡುವವರೆಗೂ ಕಾಯಬೇಕಿದೆ.

Share This Article