ರೀತು ವರ್ಮಾ ಜೊತೆ ವೈಷ್ಣವ್ ತೇಜ್ ಮದುವೆ

Public TV
1 Min Read

ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ (Varun Tej) ಇತ್ತೀಚೆಗೆ ಲಾವಣ್ಯ ತ್ರಿಪಾಠಿ ಜೊತೆ ಹಸೆಮಣೆ ಏರಿದ್ದರು. ಇದೀಗ ಈ ಬೆನ್ನಲ್ಲೇ ವೈಷ್ಣವ್ ತೇಜ್ ಮದುವೆ ಬಗ್ಗೆ ಗುಸು ಗುಸು ಶುರುವಾಗಿದೆ. ತೆಲುಗು ನಟಿ ರೀತು ವರ್ಮಾ ಜೊತೆ ವೈಷ್ಣವ್ (Vaishnav Tej) ಮದುವೆ ಎಂಬ ಸುದ್ದಿ ಸಖತ್ ಸೆನ್ಸೇಷನ್ ಕ್ರಿಯೆಟ್ ಮಾಡಿದೆ.

ನಟಿ ರೀತು ಜೊತೆ ಹಲವು ವರ್ಷಗಳಿಂದ ವೈಷ್ಣವ್ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವರುಣ್- ಲಾವಣ್ಯ ಮದುವೆಗೆ ರೀತು (Reethu Varma) ಹಾಜರಿ ಹಾಕಿದ್ದರು. ಮೆಗಾಸ್ಟಾರ್ ಕುಟುಂಬದ ಖಾಸಗಿ ಪಾರ್ಟಿಗಳಲ್ಲೂ ರೀತು ಕಾಣಿಸಿಕೊಂಡಿದ್ದರು.

ವರುಣ್ ಬಳಿಕ ವೈಷ್ಣವ್-ರೀತು ಮದುವೆ ಎಂದೇ ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿ ಹಬ್ಬುತ್ತಿದ್ದಂತೆ ಲಾವಣ್ಯ ತ್ರಿಪಾಠಿ ಅವರ ಸ್ನೇಹಿತೆ ರೀತು ಹಾಗಾಗಿ ನಮ್ಮ ಮನೆಯ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂದು ವೈಷ್ಣವ್ ಸ್ಪಷ್ಟನೆ ನೀಡಿದ್ದರು. ರೀತು ಜೊತೆಗಿನ ಮದುವೆ ವಿಚಾರವನ್ನ ತಳ್ಳಿಹಾಕಿದ್ದರು. ಇದನ್ನೂ ಓದಿ:ಒಟಿಟಿಯತ್ತ ಮುಖ ಮಾಡಿದ ಕೀರ್ತಿ ಸುರೇಶ್

ಸದ್ಯ ಶ್ರೀಲೀಲಾ ಜೊತೆ ನಟಿಸಿರುವ ಆದಿಕೇಶವ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ. ಇಬ್ಬರ ಕೆಮಿಸ್ಟ್ರಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅಂತೆ ಕಂತೆ ಸುದ್ದಿನೆಲ್ಲಾ ಸೈಡಿಗಿಟ್ಟು ಸಿನಿಮಾಗಳ ಕಡೆ ವೈಷ್ಣವ್ ಗಮನ ಕೊಡುತ್ತಿದ್ದಾರೆ.

Share This Article