ಒಂದೇ ಮನೆಯಲ್ಲಿ ವಾಸ ಮಾಡ್ತಿದ್ದಾರೆ ವಿಜಯ್, ರಶ್ಮಿಕಾ- ಸಿಕ್ತು ಮತ್ತೊಂದು ಪ್ರೂಫ್

Public TV
1 Min Read

ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿನಿಮಾ ಮೂಲಕ ತೆಲುಗಿನ ಬೆಸ್ಟ್ ಜೋಡಿಯಾಗಿ ಮೋಡಿ ಮಾಡಿದ್ದ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಲೇ ಇರುತ್ತಾರೆ. ಡೇಟಿಂಗ್ ಬಗ್ಗೆ ಗುಮಾನಿ ಇರೋ ಬೆನ್ನಲ್ಲೇ ಇಬ್ಬರು ಜೊತೆಯಾಗಿ ವಾಸ ಮಾಡ್ತಿದ್ದಾರೆ ಎಂಬುದಕ್ಕೆ ನೆಟ್ಟಿಗರಿಗೆ ಪ್ರೂಫ್ ಸಿಕ್ಕಿದೆ. ಈ ಬಗ್ಗೆ ಚರ್ಚೆ ಕೂಡ ಆಗ್ತಿದೆ.

ಶ್ರೀವಲ್ಲಿ ರಶ್ಮಿಕಾ ಅವರು ಸಹಾಯಕ ಸಾಯಿ ಮದುವೆಯಲ್ಲಿ ಮಿಂಚಿರೋ ವಿಚಾರ ನಿಮಗೆ ಗೊತ್ತೆ ಇದೆ. ಮದುವೆಗೆ ಭಾಗಿಯಾಗುವ ಮುನ್ನ ತಮ್ಮ ಮನೆಯ ಟೆರೇಸ್‍ನಲ್ಲಿ ಚೆಂದದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಕೇಸರಿ ಬಣ್ಣದ ಸಿಂಪಲ್ ಸೀರೆಯಲ್ಲಿ ನಟಿ ಕಂಗೊಳಿಸಿದ್ದಾರೆ. ಈಗ ಅಸಲಿ ವಿಚಾರ ಏನಪ್ಪಾ ಅಂದರೆ.

ಸೇಮ್ ಟು ಸೇಮ್ ಅದೇ ಟೆರೇಸ್‍ನಲ್ಲಿ ವಿಜಯ್ (Vijay Devarakonda) ಕೂಡ ಒಂದು ವಾರದ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ನಟ ಶೇರ್ ಮಾಡಿದ್ದಾರೆ. ಇಬ್ಬರು ಸೇಮ್ ಪ್ಲೇಸ್‍ನಲ್ಲಿ ಫೋಟೋ ಕ್ಲಿಕ್ಕಿಸಿರೋದು ಈಗ  ರಿಲೇಶನ್‌ಶಿಪ್ ಬಗ್ಗೆ ನೆಟ್ಟಿಗರಿಗೆ ಅನುಮಾನ ಮೂಡಿದೆ. ಇಬ್ಬರು ಒಂದೇ ಮನೆಯಲ್ಲಿ ವಾಸ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದೆ ರಶ್ಮಿಕಾ, ವಿಜಯ್ ದೇವರಕೊಂಡ ಅವರ ಶರ್ಟ್ ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವಿಚಾರ ಕೂಡ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಒಂದು ಸಿಗರೇಟ್ ಪ್ಯಾಕ್‌ಗೆ 1600 ಕೊಟ್ರಾ ಸೋನು ಗೌಡ?

ಇಬ್ಬರು ಕೆರಿಯರ್ ಪೀಕ್‍ನಲ್ಲಿರುವ ಕಾರಣ ಡೇಟಿಂಗ್ ಬಗ್ಗೆ ಸೈಲೆಂಟ್ ಆಗಿದ್ದಾರಾ? ಅಥವಾ ಮುಂದಿನ ದಿನಗಳಲ್ಲಿ ಈ ಸುದ್ದಿ ನಿಜವಾಗಿದ್ದು, ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ? ಕಾಯಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್