ಹುಟ್ಟೂರಿನಿಂದ ಮುಂಬೈಗೆ ಬರುತ್ತಿದ್ದಂತೆ ಶೂಟಿಂಗ್‌ನಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ

Public TV
1 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಹುಟ್ಟೂರು ಕೊಡಗಿಗೆ ಆಗಮಿಸಿ ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ್ದರು. ಈಗ ಮುಂಬೈ ಮಹಾನಗರಕ್ಕೆ ಬಂದಿಳಿರುವ ರಶ್ಮಿಕಾ ಎರಡೆರಡು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ಖ್ಯಾತಿಯ ರಾಣಾ ದಗ್ಗುಬಾಟಿಗೆ ಶ್ರೀನಿಧಿ ಶೆಟ್ಟಿ ನಾಯಕಿ

ರಶ್ಮಿಕಾಗೆ ಬಹುಭಾಷೆಗಳಲ್ಲಿ ಭಾರೀ ಬೇಡಿಕೆಯಿದೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್ ನಡುವೆ ಇತ್ತೀಚೆಗೆ ಕೊಡಗಿಗೆ ಬಂದು ಸ್ನೇಹಿತೆಯ ಮದುವೆಯಲ್ಲಿ ನಟಿ ಸಂಭ್ರಮಿಸಿದರು. ಬಳಿಕ ನಮ್ಮೂರೇ ನಮಗೆ ಚೆಂದ ಎಂದು ಮನೆಯನ್ನು ಮಿಸ್ ಮಾಡಿಕೊಳ್ತಿರೋದಾಗಿ ನಟಿ ಹೇಳಿಕೊಂಡಿದರು.

ಬಳಿಕ ವಿಮಾನ ಹತ್ತಿ ಮುಂಬೈಗೆ ಎಂಟ್ರಿ ಕೊಡ್ತಿದ್ದಂತೆ ಧನುಷ್ (Dhanush) ನಟನೆಯ ‘ಕುಬೇರ’ (Kubera) ಚಿತ್ರದ ಶೂಟಿಂಗ್‌ನಲ್ಲಿ ನಟಿ ಭಾಗಿಯಾಗಿದ್ದಾರೆ. ಧನುಷ್ ಮತ್ತು ನಾಗಾರ್ಜುನ ಜೊತೆ ಪ್ರಮುಖ ದೃಶ್ಯಗಳಿದ್ದು, ಚಿತ್ರೀಕರಣಕ್ಕೆ ಸಾಥ್ ನೀಡುತ್ತಿದ್ದಾರೆ. ಜೊತೆಗೆ ‘ದಿ ಗರ್ಲ್‌ಫ್ರೆಂಡ್‌’ ಚಿತ್ರದ ಶೂಟಿಂಗ್‌ನಲ್ಲಿಯೂ ನಟಿ ಭಾಗಿಯಾಗಲಿದ್ದಾರೆ.

ಅಂದಹಾಗೆ, ಬಾಲಿವುಡ್ ನಟ ಆಯುಷ್ಮಾನ್ ಖುರಾನಾಗೆ ರಶ್ಮಿಕಾ ನಾಯಕಿಯಾಗಿ ಫೈನಲ್ ಆಗಿದ್ದಾರೆ. ‘ಮುಂಜ್ಯ’ ಚಿತ್ರದ ನಿರ್ದೇಶಕ ಆದಿತ್ಯಾ ಸತ್ಪೋದರ್ ಡೈರೆಕ್ಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ:ನಟ ದರ್ಶನ್ ಬಳಿ ಇದೆ 2 ಯುಎಸ್ ಮೇಡ್ ಪಿಸ್ತೂಲ್‍ಗಳು!

ಹಾರರ್ ಕಾಮಿಡಿಯಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ರಶ್ಮಿಕಾ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದೆಯಂತೆ. ನವೆಂಬರ್‌ನಿಂದ ಸಿನಿಮಾ ಶೂಟಿಂಗ್ ಶುರು ಆಗಲಿದೆ ಎನ್ನಲಾಗಿದೆ. ಮೊದಲ ಬಾರಿಗೆ ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಕಾರಣ ಚಿತ್ರದ ಬಗ್ಗೆ ಫ್ಯಾನ್ಸ್ಗೆ ಭಾರೀ ನಿರೀಕ್ಷೆಯಿದೆ.

ಅಂದಹಾಗೆ, ಪುಷ್ಪ 2, ಅನಿಮಲ್ 2, ಸಿಖಂದರ್, ರೈನ್‌ಬೋ, ಚಾವಾ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಶ್ಮಿಕಾ ಕೈಯಲ್ಲಿವೆ.

Share This Article