ಮಹೇಶ್ ಬಾಬು ಫೋಟೋಗೆ ರಶ್ಮಿಕಾರನ್ನು ಹೋಲಿಸಿದ ನೆಟ್ಟಿಗರು

Public TV
2 Min Read

ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ‘ಪುಷ್ಪ 2’ (Pushpa 2) ಸಿನಿಮಾ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಶ್ರೀವಲ್ಲಿ ಲುಕ್ ವೈರಲ್ ಆಗುತ್ತಿದ್ದಂತೆ ಮಹೇಶ್ ಬಾಬು ಫೋಟೋಗೆ ಹೋಲಿಸಿ ಮಾತನಾಡಿದ್ದಾರೆ.

‘ಗಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬು (Mahesh Babu) ಕಣ್ಣಿನ ಬಳಿ ಸೂಪರ್ ಎಂದು ಪೋಸ್ ಕೊಟ್ಟಿದ್ದರು. ಈ ಸೀನ್ ಸಿನಿಮಾದಲ್ಲಿಯೂ ಗಮನ ಸೆಳೆದಿತ್ತು. ಇದೀಗ ಅದೇ ಲುಕ್ ಪುಷ್ಪ 2ನಲ್ಲಿಯೂ ರಿಪೀಟ್ ಆಗಿದೆ. ಮಹೇಶ್ ಬಾಬು ಫೋಟೋಗೆ ಶ್ರೀವಲ್ಲಿ ಫೋಟೋ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನೆಟ್ಟಿಗರು. ಅದಕ್ಕೆ, ಓಹ್ ನೈಸ್, ಈ ಫೋಟೋ ಇಷ್ಟ ಆಯ್ತು ಎಂದು ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೆ, ‘ಪುಷ್ಪ’ (Pushpa) ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಶ್ರೀವಲ್ಲಿ ಮಿಂಚಿದ್ದರು. ಪುಷ್ಪ ಪಾರ್ಟ್ ಒನ್‌ಗಿಂತ ಭಾಗ 2ರಲ್ಲಿ ನಟಿಯ ಲುಕ್ ವಿಭಿನ್ನವಾಗಿದೆ. ಕತ್ತಿನಲ್ಲಿ ಬಂಗಾರ ಹೇರಿಕೊಂಡು ಕಣ್ಣಿನ ಬಳಿ ಕೈ ಹಿಡಿದು ಸೂಪರ್ ಎಂದು ರಶ್ಮಿಕಾ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ನಟಿಗೆ ಚಿತ್ರತಂಡ ಹುಟ್ಟುಹಬ್ಬಕ್ಕೆ ಶುಭಕೋರಿದೆ. ಮುಗ್ಧ ಹುಡುಗಿಯಂತಿದ್ದ ಶ್ರೀವಲ್ಲಿ ಇದೀಗ ರೆಬೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಕೈ ಸರ್ಜರಿ ಸಕ್ಸಸ್

ಪುಷ್ಪ ಪಾರ್ಟ್ 2ಗೆ `ಪುಷ್ಪ: ದಿ ರೈಸ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್‌ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್‌ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ನಡೆದಿದೆ ಎನ್ನಲಾಗಿದೆ. ಮೊದಲ ಭಾಗಕ್ಕಿಂತ 2ನೇ ಭಾಗ ದೊಡ್ಡದಾಗಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಕನ್ನಡದ ಡಾಲಿ ಧನಂಜಯ್ ಸೇರಿದಂತೆ ಹಲವರು ನಟಿಸಿದ್ದಾರೆ. ಇದೇ ಆಗಸ್ಟ್ 15ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

Share This Article