RCB Unbox: Bangalore ಬೇಡ ಎಂದ ರಶ್ಮಿಕಾ ಮಂದಣ್ಣ

Public TV
1 Min Read

ನ್ನಡತಿ, ಬಹುಭಾಷಾ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಇದರ ನಡುವೆ Bangalore ಬೇಡ ಅಂತ ರಶ್ಮಿಕಾ ಹೇಳಿದ್ದಾರೆ. ರಿಷಬ್, ಅಶ್ವಿನಿ, ಶಿವಣ್ಣ, ಸುದೀಪ್ (Sudeep) ನಂತರ ಕೊಡಗಿನ ಬೆಡಗಿ ಆರ್‌ಸಿಬಿ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಕ್ಯಾರವಾನ್‌ನಲ್ಲಿರುವ ಕನ್ನಡಿಯಲ್ಲಿ Royal Challengers Bangalore ಎಂದು ಬರೆದಿತ್ತು. ಕ್ಯಾರವಾನ್ ಒಳ ಬಂದ ಆಕೆ ಅದನ್ನು ನೋಡಿ ಎನ್ನುವುದನ್ನು Bangalore ಅಳಿಸಿ ಅರ್ಥ ಆಯ್ತಾ? ಎಂದು ಕೇಳಿದ್ದಾರೆ. ಹೀಗೆ ಬಹಳ ಸಿಂಪಲ್ ಆಗಿರುವ ಪ್ರೋಮೊ ಗಮನ ಸೆಳೆಯುತ್ತಿದೆ. ರಶ್ಮಿಕಾ ಅಭಿಮಾನಿಗಳಿಗೆ ಪ್ರೋಮೊ ಬಹಳ ಇಷ್ಟವಾಗಿದೆ.

ಸದಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ನಟಿ, ಈಗ ಬೆಂಗಳೂರು ಕುರಿತು ಆರ್‌ಸಿಬಿ (RCB) ಪ್ರೋಮೋದಲ್ಲಿ ಕಾಣಿಸಿಕೊಳ್ಳುವ ಮೂಲಕ ರಶ್ಮಿಕಾ ಸಾಥ್ ನೀಡಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಆರ್‌ಸಿಬಿ ಐಪಿಎಲ್ ಕ್ರಿಕೆಟ್ ತಂಡದ ಜೊತೆ ಹೊಂಬಾಳೆ ಸಂಸ್ಥೆ ಕೂಡ ಸಾಥ್ ನೀಡಿದೆ. ಆರ್‌ಸಿಬಿಗೆ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಫಿಲ್ಮ್ ಕೈಜೋಡಿಸಿದ್ದಾರೆ. ಮಾರ್ಚ್ 22ರಿಂದ 17ನೇ ಐಪಿಎಲ್ ಸೀಸನ್ ಆರಂಭವಾಗಲಿದೆ. ಇದನ್ನೂ ಓದಿ:ಒಟಿಟಿಗೆ ಕೊನೆಗೂ ಬಂತು ಹನುಮಾನ್

Bangalore ಎನ್ನುವುದನ್ನು Bengaluru ಎಂದು ಬದಲಾಯಿಸಿದ್ದರು. ಆರ್‌ಸಿಬಿ ತಂಡದ ಬಗ್ಗೆ ಮಾತನಾಡುವಾಗ ಮಾತ್ರ ಅದು Bangalore ಎಂದೇ ಇತ್ತು. ಅಭಿಮಾನಿಗಳು ಇದನ್ನು ಬದಲಿಸಿ Bengaluru ಎಂದು ಮಾಡಬೇಕು ಎಂದು ಮನವಿ ಮಾಡುತ್ತಿದ್ದರು. ಇದೀಗ ರಿಷಬ್ ಶೆಟ್ಟಿ, ಸುದೀಪ್‌, ಅಶ್ವಿನಿ ಸ್ಪೆಷಲ್ ವಿಡಿಯೋದಲ್ಲಿ ಆ ಬಗ್ಗೆ ಸುಳಿವು ಕೊಟ್ಟಿದ್ದರು. ಮಾರ್ಚ್ 19ರಂದು ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಆ ದಿನ ಅಧಿಕೃತವಾಗಿ ಈ ವಿಚಾರ ಗೊತ್ತಾಗಲಿದೆ.

Share This Article