ಸ್ಟೂಡೆಂಟ್ಸ್‌ಗೆ ಆಲ್ ದಿ ಬೆಸ್ಟ್ ಎಂದ ರಶ್ಮಿಕಾ ಮಂದಣ್ಣ

Public TV
1 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗುಡ್ ಲಕ್ ಹೇಳಿದ್ದಾರೆ. ಪರೀಕ್ಷೆ ನಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ನಿಮಗೆ ಒಳ್ಳೆದಾಗಲಿ ಎಂದು ಸ್ವೀಟ್ ಆಗಿ ರಶ್ಮಿಕಾ ಹಾರೈಸಿದ್ದಾರೆ.

ರಶ್ಮಿಕಾ ಮಂದಣ್ಣ ಕನ್ನಡದ ಹುಡುಗಿ, ಕೊಡಗಿನ ಬೆಡಗಿ. ಈಗ ಬಾಲಿವುಡ್‌ಗೆ ಹೋಗಿ ಮುಟ್ಟಿ ಮೆಟ್ಟಿ ನಿಂತಿದ್ದಾರೆ. ಮುಟ್ಟಿದ್ದೆಲ್ಲ ಬರೀ ಚಿನ್ನ ಅಲ್ಲ.ವಜ್ರ ಖಚಿತ ಸಿಂಹಾಸನ. ‘ಅನಿಮಲ್’ (Animal) ಮಹಾ ಗೆಲುವು ಬಾಲಿವುಡ್‌ನಲ್ಲಿ ಸದ್ಯಕ್ಕೆ ಅಲುಗಾಡಿಸದ ಕುರ್ಚಿಯಲ್ಲಿ ಕೂಡಿಸಿದೆ. ನ್ಯಾಶನಲ್ ಕ್ರಶ್‌ಗೆ ಈಗ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಆಗಾಗ ಫ್ಯಾನ್ಸ್ ಜೊತೆ ಮಾತಾಡುತ್ತಾರೆ. ಬದುಕಿನ ದಿಕ್ಕು ಬದಲಿಸುವ ಪರೀಕ್ಷೆ ಬರೆಯಲು ಸಜ್ಜಾಗಿರುವ ಸ್ಟೂಡೆಂಟ್ಸ್‌ಗೆ ವಿಶ್ ಮಾಡಿದ್ದಾರೆ. ಚೆನ್ನಾಗಿ ಓದಿ, ಗೆದ್ದು ಬನ್ನಿ ಎಂದಿದ್ದಾರೆ.

ಎಕ್ಸ್ ಮೂಲಕ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ, ‘ಪರೀಕ್ಷೆ ನಡೆಯುತ್ತಿರುವ ಎಲ್ಲರಿಗೂ ಆಲ್ ದಿ ಬೆಸ್ಟ್! ಚೆನ್ನಾಗಿ ಎಕ್ಸಾಂ ಬರೆಯಿರಿ. ನಿಮಗೆಲ್ಲಾ ಧನಾತ್ಮಕ ಶಕ್ತಿ ಮತ್ತು ದೊಡ್ಡ ಅಪ್ಪುಗೆಯನ್ನು ಕಳುಹಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ದರ್ಶನ್ ವಿರುದ್ದ ಕೇಸ್ ದಾಖಲಿಸದ್ದಕ್ಕೆ ಕೋರ್ಟ್ ಮೊರೆ ಹೋದ ರೇಣುಕಮ್ಮ

ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಚಾವಾ, ಅನಿಮಲ್ 2, ಪುಷ್ಪ 2 (Pushpa 2), ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Share This Article