ವಿಜಯ್‌ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ದೀಪಾವಳಿ ಸೆಲೆಬ್ರೇಶನ್‌

Public TV
1 Min Read

ಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಇಬ್ಬರು ಒಬ್ಬರನ್ನೊಬ್ಬರೂ ಪ್ರೀತಿಸುತ್ತಿದ್ದಾರೆ. ಆದರೂ ನಾವಿಬ್ಬರೂ ಫ್ರೆಂಡ್ಸ್ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಇಬ್ಬರ ಡೇಟಿಂಗ್ ವಿಚಾರವಾಗಿ ಹಲವು ಬಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇದೀಗ ವಿಜಯ್ ಮನೆಯಲ್ಲಿ ರಶ್ಮಿಕಾ, ದೀಪಾವಳಿ ಹಬ್ಬ ಆಚರಣೆ ಮಾಡಿರೋದಕ್ಕೆ ಸಾಕ್ಷಿವೊಂದು ಅಭಿಮಾನಿಗಳಿಗೆ ಸಿಕ್ಕಿದೆ.

ಸೀರೆಯುಟ್ಟಿರುವ ಫೋಟೋವೊಂದನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ‘ಹ್ಯಾಪಿ ದೀಪಾವಳಿ ಮೈ ಲವ್ಸ್’ ಎಂದು ಅಡಿಬರಹ ನೀಡಿದ್ದಾರೆ. ವಿಜಯ್ ಮನೆಯ ಹಬ್ಬದ ಸಂಭ್ರಮದ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅವರು ಕೂಡ ರಶ್ಮಿಕಾ ನೀಡಿದ ಕ್ಯಾಪ್ಷನ್ ಅನ್ನೇ ನೀಡಿದ್ದಾರೆ. ಇನ್ನೂ ರಶ್ಮಿಕಾ ಕುಳಿತಿರುವ ಫೋಟೋದಲ್ಲಿ ಬ್ಯಾಕ್‌ಗ್ರೌಂಡ್ ಲುಕ್ ನೋಡಿ ಇದು ವಿಜಯ್ ಮನೆಯೆಂದೇ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಸದ್ಯ ವಿಜಯ್‌ ಮನೆಯಲ್ಲಿ ನಟಿ ಹಬ್ಬ ಸೆಲೆಬ್ರೇಟ್‌ ಮಾಡಿರೋದು ನಿಜ ಎನ್ನಲಾಗುತ್ತಿದೆ. ಇದನ್ನೂ ಓದಿ:ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್: ತಪ್ಪಿದ ಅನಾಹುತ

 

View this post on Instagram

 

A post shared by Vijay Deverakonda (@thedeverakonda)

ವಿಜಯ್ ದೇವರಕೊಂಡ ಕುಟುಂಬದ ಜೊತೆ ರಶ್ಮಿಕಾಗೇ ಉತ್ತಮ ಒಡನಾಟವಿದೆ. ವಿಜಯ್ ಮನೆಗೆ ಭೇಟಿ ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಭೇಟಿ ನೀಡಿದ್ದಾರೆ. ಇತ್ತೀಚೆಗೆ ‘ಖುಷಿ’ ಸಿನಿಮಾದ ಪ್ರಚಾರದ ವೇಳೆ ಮದುವೆ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ನೀಡುತ್ತೇನೆ ಎಂದು ವಿಜಯ್ ತಿಳಿಸಿದ್ದರು.

ಪದೇ ಪದೇ ವಿಜಯ್ ಜೊತೆಗಿನ ಗೆಳೆತನ ವಿಚಾರವಾಗಿಯೇ ಹೈಲೆಟ್ ಆಗ್ತಿರೋ ರಶ್ಮಿಕಾ ಈ ವರ್ಷ ಅಭಿಮಾನಿಗಳಿಗೆ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಕಾದುನೋಡಬೇಕಿದೆ.

Share This Article