ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?

By
1 Min Read

‘ಪುಷ್ಪ 2′ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಶಾಹಿದ್ ಕಪೂರ್ (Shahid Kapoor) ನಟನೆಯ ಹೊಸ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಪ್ರಭಾಸ್ ಸಿನಿಮಾದಲ್ಲಿ ನಯನತಾರಾ ಐಟಂ ಡ್ಯಾನ್ಸ್?

‘ಕಾಕ್‌ಟೈಲ್’ ಸಿನಿಮಾದ ಸೀಕ್ವೇಲ್‌ನಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಕಥೆಯ ಕುರಿತು ನಟಿಯ ಬಳಿ ಒಂದು ಹಂತದ ಚರ್ಚೆ ಕೂಡ ನಡೆದಿದೆ ಎನ್ನಲಾಗಿದೆ. ನಟಿ ಓಕೆ ಅಂದ್ರಾ? ಎಂಬುದು ಇದುವರೆಗೂ ಖಾತ್ರಿಯಾಗಿಲ್ಲ. ತಂಡದ ಕಡೆಯಿಂದ ಅನೌನ್ಸ್ ಆಗಲಿದೆಯಾ ಕಾಯಬೇಕಿದೆ.

ಈ ಹಿಂದೆ ‘ಕಾಕ್‌ಟೈಲ್’ ಮೊದಲ ಭಾಗದಲ್ಲಿ ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸಿದರು. ಈ ಚಿತ್ರ ಸಕ್ಸಸ್ ಕಂಡಿತ್ತು. ಇದೀಗ ಹಲವು ವರ್ಷಗಳ ಬಳಿಕ ಇದೇ ಸಿನಿಮಾದ ಸೀಕ್ವೆಲ್ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ. ಹೊಸ ಜೋಡಿಯ ಕಥೆ ತೋರಿಸಲು ಹೊರಟಿದ್ದಾರೆ.

ಇನ್ನೂ ಈಗಾಗಲೇ ರಶ್ಮಿಕಾ ನಟಿಸಿರುವ ಬಾಲಿವುಡ್‌ನ ‘ಅನಿಮಲ್’ (Animal) ಸಿನಿಮಾ ಸಕ್ಸಸ್ ಕಂಡಿದೆ. ಜೊತೆಗೆ ‘ಪುಷ್ಪ 2’ (Pushpa 2) ಹಿಂದಿ ವರ್ಷನ್‌ನಲ್ಲೂ ಉತ್ತಮ ಗಳಿಕೆ ಮಾಡಿದೆ. ಈ ಸಿನಿಮಾ ಒಟ್ಟಾರೆ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ.

Share This Article