ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಭಯ- ರಶ್ಮಿಕಾ ಮಂದಣ್ಣಗೂ ಭದ್ರತೆ?

Public TV
1 Min Read

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್‌ನ ಬೆದರಿಕೆ ಹಿನ್ನೆಲೆ ‘ಸಿಖಂದರ್’ (Sikandar) ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣಗೂ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ಜಾಣಮರಿ ಸಾಂಗ್‌ ರಿಲೀಸ್

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ (Salman Khan) ಬೆದರಿಕೆಗಳು ಬರುತ್ತಿವೆ. ಸಲ್ಮಾನ್ ಖಾನ್ ಆಪ್ತರಾಗಿರುವವರು ಬಿಷ್ಣೋಯಿ ಹಿಟ್ ಲಿಸ್ಟ್‌ನಲ್ಲಿದ್ದಾರೆ. ಸಿದ್ದಿಕ್ ಹತ್ಯೆಯ ಬೆನ್ನಲ್ಲೇ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸಲಾಗಿದೆ. ಜೀವ ಬೆದರಿಕೆಯ ನಡುವೆಯೇ ಸಲ್ಮಾನ್ ‘ಸಿಖಂದರ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿರುವ ರಶ್ಮಿಕಾ ಮಂದಣ್ಣ ಸೇರಿದಂತೆ ಎಲ್ಲಾ ಕಲಾವಿದರಿಗೂ ಚಿತ್ರತಂಡ ಹೆಚ್ಚಿನ ಭದ್ರತೆ ನೀಡಲು ಯೋಜಿಸಿದೆ ಎಂಬ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ. ತೀವ್ರ ಬೆದರಿಕೆ ಇರುವ ಹಿನ್ನೆಲೆ ಚಿತ್ರತಂಡ ಈ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.

Share This Article