ಸಿಎಂ ಬಳಿ ನಟಿ ರಶ್ಮಿಕಾ, ಹರ್ಷಿಕಾ ಮನವಿ

Public TV
1 Min Read

ಬೆಂಗಳೂರು: ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯ ಟ್ವಿಟ್ಟರ್ ಅಭಿಯಾನಕ್ಕೆ ಸ್ಯಾಂಡಲ್‍ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಬೆಂಬಲ ಸೂಚಿಸಿದ್ದರು. ಈ ಬೆನ್ನಲ್ಲೇ ಇದೀಗ ಕೊಡಗಿನ ಬೆಡಗಿಯರಾದ ನಟಿ ರಶ್ಮಿಕಾ ಮಂದಣ್ಣ ಹಾಗೂ ಹರ್ಷಿಕಾ ಪೂಣಚ್ಚ ಟ್ವೀಟ್ ಮಾಡುವ ಮೂಲಕ ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ಹರ್ಷಿಕಾ ಪೂಣಚ್ಚ ವಿಡಿಯೋ ಹಾಕಿ ಟ್ವೀಟ್ ಮಾಡುವ ಮೂಲಕ ಕೊಡಗಿನಲ್ಲಿ ನಡೆಯುತ್ತಿರುವ ಸುಸಜ್ಜಿತ ಆಸ್ಪತ್ರೆಯ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ರಶ್ಮಿಕಾ ಟ್ವೀಟ್‍ನಲ್ಲಿ ಏನಿದೆ?
`ತುಂಬಾ ಮುಖ್ಯವಾಗಿ ಬೇಕಾಗಿರುವುದು ಅಂದರೆ ಅದು ಆಸ್ಪತ್ರೆ ಹಾಗೂ ನಮ್ಮ ಕೂರ್ಗ್‍ನಲ್ಲಿ ಆಸ್ಪತ್ರೆ ಇಲ್ಲ. ಒಳ್ಳೆಯ ಆಸ್ಪತ್ರೆಗಾಗಿ ನಾವು ದೂರ ಪ್ರಯಾಣಿಸಬೇಕು. ಅದರ ಬದಲು ಕೊಡಗಿನಲ್ಲಿ ಆಸ್ಪತ್ರೆ ಇದ್ದರೆ ಜನರಿಗೆ ತುಂಬಾನೇ ಸಹಾಯವಾಗುತ್ತದೆ. ದಯವಿಟ್ಟು ಸ್ಪಂದಿಸಿ ಎಂದು ಸಿಎಂಗೆ ಟ್ಯಾಗ್ ಮಾಡಿ #WeNeedEmergencyHospitalInKodagu ಹ್ಯಾಶ್ ಟ್ಯಾಗ್ ಬಳಸಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

ಹರ್ಷಿಕಾ ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ,#WeNeedEmergencyHospitalInKodagu ಅಭಿಯಾನಕ್ಕೆ ನಾನು ಸಪೋರ್ಟ್ ಮಾಡುತ್ತೇನೆ. ಏಕೆಂದರೆ ಇತ್ತೀಚೆಗಷ್ಟೇ ನನ್ನ ತಂದೆಗೆ ಹುಷಾರಿರಲಿಲ್ಲ. ನಾನು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಬೇಕಾಯಿತು. ಏಕೆಂದರೆ ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇರಲಿಲ್ಲ. ಈ ರೀತಿಯ ತೊಂದರೆ ಬೇರೆಯವರಿಗೆ ಆಗಬಾರದು. ಸಾಕಷ್ಟು ವರ್ಷಗಳಿಂದ ಈ ಸಮಸ್ಯೆ ಆಗುತ್ತಿದೆ. ಇನ್ನು ಮುಂದೆ ಈ ಸಮಸ್ಯೆ ಆಗಬಾರದು. ಹಾಗಾಗಿ ಕೊಡಗಿನಲ್ಲಿ ಆಸ್ಪತ್ರೆ ಬರಲೇಬೇಕು. ಈ ಅಭಿಯಾನ ಶುರು ಮಾಡಿದವರಿಗೆ ಧನ್ಯವಾದಗಳು. ಎಲ್ಲರೂ ಈ ಅಭಿಯಾನಕ್ಕೆ ಬೆಂಬಲ ನೀಡೋಣ ಎಂದು ಹೇಳಿದ್ದಾರೆ.

https://twitter.com/actressharshika/status/1139383011001061376

ಇದೇ ಮೊದಲ ಬಾರಿಗೆ #WeNeedEmergencyHospitalInKodagu ಅಭಿಯಾನವನ್ನು ಕೊಡಗಿನ ಜನತೆ ಆರಂಭಿಸಿದ್ದಾರೆ. ಕೊಡಗಿನಲ್ಲಿ ಐಷಾರಾಮಿ ರೆಸಾರ್ಟ್, ಹೋಮ್ಸ್ ಸ್ಟೇ ಇದೆ. ಆದರೆ ಸುಸಜ್ಜಿತ ಆಸ್ಪತ್ರೆ ಇಲ್ಲ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ಮೂಲಕ ಸರ್ಕಾರದ ಗಮನ ಸೆಳೆಯಲು ಕೊಡಗಿನ ಮಂದಿ ನಿರ್ಧರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *