ಆಡಿಶನ್‍ಗೆ ಕರೆದು ಅತ್ಯಾಚಾರಕ್ಕೆ ಯತ್ನಿಸಿದ್ದ- ಕಹಿ ಅನುಭವ ಬಿಚ್ಚಿಟ್ಟ ನಟಿ

Public TV
2 Min Read

– ಭೇಟಿಯಾದ ದಿನವೇ ಅಳತೆ ಕೇಳಿದ್ದ

ಹೈದರಾಬಾದ್: ಮೀಟೂ ಅಭಿಯಾನ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಈ ಮೂಲಕ ಅನೇಕ ನಟಿಯರು ತಮಗಾದ ಕಹಿ ಅನುಭವಗಳನ್ನು ಹೇಳಿಕೊಂಡಿದ್ದರು. ಇದೀಗ ಖ್ಯಾತ ನಟಿಯೊಬ್ಬಳು ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

ನಟಿ ರಶ್ಮಿ ದೇಸಾಯಿ ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ರಶ್ಮಿಗೆ ಸಿನಿಮಾದಲ್ಲಿ ಅಭಿನಯಿಸಬೇಕೆಂದು ಬಾಲ್ಯದಲ್ಲಿಯೇ ಕನಸುಕಂಡಿದ್ದರು. ಆ ಕನಸನ್ನು ನನಸು ಮಾಡಿಕೊಳ್ಳಲು ತಮ್ಮ 16ನೇ ವಯಸ್ಸಿಯಲ್ಲೇ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ತಮ್ಮ ಪ್ರಯತ್ನ ಶುರು ಮಾಡಿದ್ದರು. ಈ ವೇಳೆ ನಡೆದ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ.

ನಾನು ಚಿತ್ರಗಳಲ್ಲಿ ನಟಿಸಲು ಅವಕಾಶಕ್ಕಾಗಿ ಹುಡುಕಾಡುತ್ತಿದ್ದೆ. ಆಗ ನನಗೆ ಸೂರಜ್ ಎಂಬಾತನ ಪರಿಚಯವಾಗಿತ್ತು. ಆತ ತನಗೆ ಯಶ್ ರಾಜ್ ಫಿಲ್ಮ್, ಬಾಲಾಜಿ ಫಿಲ್ಮ್ ನವರು ಗೊತ್ತು, ನಿನಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದ. ಹೀಗಾಗಿ ನಾನು ಆತನನ್ನು ನಂಬಿ ಪ್ರತಿ ದಿನ ಭೇಟಿ ಮಾಡುತ್ತಿದ್ದೆ. ಅಲ್ಲದೇ ನಾನು ಆತನನ್ನು ಭೇಟಿ ಆದ ದಿನವೇ ನನ್ನ ದೇಹದ ಅಳತೆ ಕೇಳಿದ್ದನು. ನಾನು ಗೊತ್ತಿಲ್ಲ ಅಂತ ಹೇಳಿದ್ದೆ ಎಂದು ತಿಳಿಸಿದರು.

ಒಂದು ದಿನ ಆಡಿಶನ್‍ಗೆ ಬಾ ಎಂದು ಹೋಟೆಲ್‍ಗೆ ಕರೆಸಿದ್ದನು. ನಾನು ಖುಷಿಯಿಂದ ಆಡಿಶನ್ ಕೊಡಲು ಹೋದೆ. ಆದರೆ ಅಲ್ಲಿ ಆತ ಹೋಟೆಲ್ ರೂಮಿನಲ್ಲಿ ನನಗೆ ಮದ್ಯಪಾನ ಮಾಡಿಲು ಪ್ರಯತ್ನಿಸಿದ್ದು, ನಾನು ಕುಡಿಯಲು ನಿರಾಕರಿಸಿದೆ. ನಂತರ ಆತ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಆಗ ನನಗೆ ಮದ್ಯಪಾನ ಮಾಡಿಸಿ ನನ್ನ ಮೇಲೆ ಅತ್ಯಾಚಾರ ಮಾಡುವ ಉದ್ದೇಶ ಹೊಂದಿದ್ದನು ಎಂದು ತಿಳಿಯಿತು. ತಕ್ಷಣ ನಾನು ಅಲ್ಲಿಂದ ಹೊರಗೆ ಬಂದು ನಡೆದ ಘಟನೆಯ ಬಗ್ಗೆ ತಾಯಿಗೆ ತಿಳಿಸಿದೆ ಎಂದರು.

ಮಾರನೇ ದಿನ ಅಮ್ಮ ಆತನಿಗೆ ಕಪಾಳಕ್ಕೆ ಹೊಡೆದು ಎಚ್ಚರಿಕೆ ನೀಡಿದ್ದರು. ಅಂದಿನಿಂದ ನಾನು ಆತನನ್ನು ನೋಡಿಯೇ ಇಲ್ಲ ಎಂದು ಸಂದರ್ಶನದಲ್ಲಿ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ರಶ್ಮಿ ದೇಸಾಯಿ ಬಾಲಿವುಡ್‍ನ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕಿರುತೆರೆ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಬಿಗ್‍ಬಾಸ್ ಶೋನಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *