ಅಪ್ಪು ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ: ರಮ್ಯಾ

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಅವರು ನಟ ಪುನೀತ್ ರಾಜ್‍ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನನಗೆ ಈ ಸುದ್ದಿಯನ್ನು ನಂಬಲು ಅಸಾಧ್ಯವಾಗಿದೆ. ನಾನು ಸಿನಿಮಾದಲ್ಲಿ ಹೆಸರು ಮಾಡಲು ಅವರ ಕುಟುಂಬವೇ ಕಾರಣವಾಗಿದೆ. ಅಪ್ಪು ಅವರು ನನಗೆ ಕೋ ಸ್ಟಾರ್ ಮಾತ್ರವಲ್ಲಿದೇ ಒಳ್ಳೆಯ ಸ್ನೇಹಿತನಾಗಿದ್ದರು. ನಾನು ಏನೇ ಇದ್ದರು ಅವರ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಅಪ್ಪು ಅವರು ಸಿನಿಮಾ ತಂಡದ ಜೊತೆಗೆ ಸರಳತೆಯಿಂದ ಇರುತ್ತಿದ್ದರು. ಅಪ್ಪು ಅವರು ಒಳ್ಳೆ ಡಾನ್ಸರ್ ಆಗಿದ್ದರು. ಅವರು ನನಗೆ ಡಾನ್ಸ್ ಹೇಳಿಕೊಡುತ್ತಿದ್ದರು. ಅಪ್ಪು ಅವರು ಮೀಡಿಯಾಗಳಿಗೆ ಗೊತ್ತೇ ಇರದೆ ಕೆಲವು ಸಹಾಯವನ್ನು ಮಾಡಿದ್ದಾರೆ. ಅವರ ಸಹಾಯ ಮಾಡಿದ್ದನು ಎಲ್ಲೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಪುನೀತ್ ಅವರ ಕುರಿತಗಾಗಿ ಹಳೆಯ ನೆನೆಪುಗಳನ್ನು ಮೆಲಕು ಹಾಕುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

ಅವರ ಪ್ರತಿಯೊಂದು ಸಿನಿಮಾವನ್ನು ಇದು ನನ್ನ ಮೊದಲ ಸಿನಿಮಾ ಎಂದು ಮಾಡುತ್ತಿದ್ದರು. ಡಾ. ರಾಜ್‍ಕುಮಾರ್ ಅವರ ಮಗ ಎನ್ನುವುದು ಅವರಿಗೆ ಇರಲಿಲ್ಲ. ಸರಳವಾಗಿ ನಡೆದುಕೊಳ್ಳುತ್ತಿದ್ದರು. ನಗುತ್ತಿದ್ದರು, ಸುತ್ತಮುತ್ತಲಿನ ಜನರನ್ನು ನಗಿಸುತ್ತಿದ್ದರು ಎಂದು ಅಪ್ಪ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ನೆನೆಪಿಸಿಕೊಂಡು ಅಪ್ಪು ಇನ್ನಿಲ್ಲ ಎನ್ನುವ ದುಃಖ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅಪ್ಪು ನಿಧನದ ಕುರಿತಾಗಿ ಪೋಸ್ಟ್ ಹಾಕಿದ್ದಾರೆ. ಭಾವನೆಗಳು ಕೆಲವು ವೈಯಕ್ತಿಕ ಅವುಗಳನ್ನು ಪದಗಳಲ್ಲಿ ಹೇಳಲಾಗುವುದಿಲ್ಲ. ರಿಪ್ ಎಂದು ಹೇಳಿ ಮುಗಿಸಲಾಗದು. ದೇಹ ಮನಸ್ಸಿಗೂ ಮೀರಿದ್ದು ಭಾವನೆಯಾಗಿದೆ. ಕೆಲವು ಬಾಂಧವ್ಯ ವರ್ಣನೆಗೂ ಮೀರಿದ್ದಾಗಿದೆ. ಬೇರೆ ಏನನ್ನು ಹೇಳಲಾಗದ ಸಂದರ್ಭ ಇದು. ಈ ವಿಚಾರದ ಬಗ್ಗೆ ಸಧ್ಯದ ಸಂದರ್ಭದಲ್ಲಿ ಹೆಚ್ಚೇನೂ ಕೆಳದಿರಲು ಮಾಧ್ಯಮದವರಲ್ಲಿ ವಿನಂತಿ ಮಾಡುತ್ತೇನೆ. ಸಿನಿಮಾ ರಂಗದಲ್ಲಿ ಆತ ನನಗೆ ಅತ್ಯಂತ ಆಪ್ತ ಸ್ನೇಹಿತ. ಅವರಿಗೂ ಹಾಗೂ ಅವರ ಪರಿವಾರದವರಿಗೂ ಎಂದೆಂದಿಗೂ ನನ್ನ ಅತ್ಯಂತ ಪ್ರೀತಿಪೂರ್ವಕ ಹಾಗೂ ಹೃದಯದಾಳದ ಗೌರವ ನಮನಗಳು ಎಂದಿದ್ದಾರೆ.

 

View this post on Instagram

 

A post shared by Ramya/Divya Spandana (@divyaspandana)

ಕೇವಲ ಇನ್‍ಸ್ಟಾಗ್ರಾಮ್ ಪೋಸ್ಟ್ ಅಥವಾ ಟ್ವೀಟ್ ಮೂಲಕ ಭಾವನೆಗಳನ್ನು ಹೇಳಲಾಗದು. ಅವರ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ. ಅಪ್ಪು ನೀವು ಎಂದಿಗೂ ಮಾಸದ ನೆನೆಪು. ಸದಾ ನನ್ನ ನೆನಪಿನಲ್ಲಿ ಎಂದೆಂದೂ ಇರುವಿರಿ ಎಂದು ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *