ತಮಿಳು ನಟ ಸೂರ್ಯ ಜೊತೆಗಿನ ಫೋಟೋ ಶೇರ್ ಮಾಡಿದ ರಮ್ಯಾ

Public TV
2 Min Read

ಮೋಹಕತಾರೆ ರಮ್ಯಾ (Ramya) ಸ್ಯಾಂಡಲ್‌ವುಡ್‌ಗೆ (Sandalwood) ಕಂಬ್ಯಾಕ್ ಆಗಿದ್ದಾರೆ. ‘ಉತ್ತರಾಕಾಂಡ’ (Uttarakanda) ಸಿನಿಮಾದಲ್ಲಿ ಮಿಂಚಲು ಸಕಲ ಸಿದ್ಧತೆ ಮಾಡ್ತಿದ್ದಾರೆ. ಹೀಗಿರುವಾಗ ನಟ ಸೂರ್ಯ ಜೊತೆಗಿನ ಫೋಟೋ ಹಂಚಿಕೊಂಡು ಅವರ ಜೊತೆ ನಟಿಸಿದ ಸಿನಿಮಾ ಬಗ್ಗೆ ನಟಿ ಮಾತನಾಡಿದ್ದಾರೆ. 20 ವರ್ಷಗಳ ಸಿನಿ ಜರ್ನಿಯಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿರೋ ರಮ್ಯಾ ಈಗ ಸೂರ್ಯ (Suriya) ಜೊತೆಗಿನ ಚಿತ್ರದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.

ಸದ್ಯ ರಮ್ಯಾ ಫಾರಿನ್‌ನಲ್ಲಿದ್ದಾರೆ. ಹೊಸ ಸಿನಿಮಾಗಾಗಿ ಮತ್ತು ತಮ್ಮ ಫಿಟ್‌ನೆಸ್ ಕಡೆ ಹೆಚ್ಚು ಒತ್ತು ಕೊಡ್ತಿದ್ದಾರೆ. ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲು ರಮ್ಯಾ ಸಜ್ಜಾಗುತ್ತಿದ್ದಾರೆ. ಡಾಲಿ(Daali) ಜೊತೆ ರೊಮ್ಯಾನ್ಸ್ ಮಾಡಲು ಈಗಾಗಲೇ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಟಿ, ನಿರ್ಮಾಪಕಿಯಾಗಿಯೂ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ.

2008ರಲ್ಲಿ ‘ಸೂರ್ಯ ಸನ್ ಆಫ್ ಕೃಷ್ಣಮೂರ್ತಿ’ (Surya S/O Krishnan) ಸಿನಿಮಾ ಸೂಪರ್ ಹಿಟ್ ಆಗಿತ್ತು. ನಟಿ ರಮ್ಯಾ ಅವರಿಗೂ ಒಳ್ಳೆಯ ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾ ಮೂಲಕವೇ ಕಾಲಿವುಡ್ ಸಿನಿಮಾರಂಗದಲ್ಲಿ ದಿವ್ಯಾ ಸ್ಪಂದನ ಹೆಸರಲ್ಲಿ ಮಿಂಚಿದ್ರು. ಈ ಸಿನಿಮಾದಲ್ಲಿ ನಟಿಯ ಪ್ರಿಯಾ ಪಾತ್ರವನ್ನು ಜನರು ಇನ್ನೂ ಮರೆತಿಲ್ಲ. ಇಂದಿಗೂ ಅನೇಕರಿಗೆ ಈ ಸಿನಿಮಾ ಫೇವರಿಟ್ ಆಗಿದೆ. ಇದೀಗ ಸಿನಿಮಾದ ಪಾತ್ರದ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಹರಿಕಥೆ ಅಲ್ಲ ಗಿರಿ ಕಥೆ’ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಚ ಮದುವೆ ಫೋಟೋಸ್

 

View this post on Instagram

 

A post shared by Ramya|Divya Spandana (@divyaspandana)

ಈ ಚಿತ್ರದಲ್ಲಿ ಕೆಲಸ ಮಾಡಲು ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ಕೆಲಸ ಮಾಡುವಾಗ ನನಗೆ 22 ವರ್ಷ ವಯಸ್ಸಾಗಿತ್ತು ಮತ್ತು ನಾನು ಹಿಂದೆಂದೂ ಅನುಭವಿಸದಂತಹ ತೀವ್ರವಾದ ಭಾವನೆಗಳನ್ನ ಇಲ್ಲಿ ತೋರಿಸಬೇಕಿತ್ತು. ನಾನು ಜೀವನ, ಸಂಬಂಧಗಳ ಬಗ್ಗೆ ತುಂಬಾ ಕಲಿತಿದ್ದೇನೆ ಮತ್ತು ನನಗೆ ಪ್ರಿಯಾ ಯಾವಾಗಲೂ ತಾಳ್ಮೆ ಮತ್ತು ಪ್ರೀತಿಯ ಸಾರಾಂಶವಾಗಿದ್ದಾರೆ. ಆಕೆಯ ಹಾಗೆ  ನಾನು ಪ್ರೀತಿಸಬಹುದೆಂದು ನಾನು ಬಯಸುತ್ತೇನೆ. ಹೇಗಾದರೂ, ಜುಲೈ 21ರಂದು ಈ ರಾಷ್ಟ್ರೀಯ ಪ್ರಶಸ್ತಿ ವಿಜೇತ, ಕಲ್ಟ್-ಕ್ಲಾಸಿಕ್‌ನ ಮ್ಯಾಜಿಕ್ ಅನ್ನು ನೀವು ಆನಂದಿಸಿ ಎಂದು ರಮ್ಯಾ ಬರೆದಿದ್ದಾರೆ. ಒಟ್ನಲ್ಲಿ ಇಂದಿಗೂ ಈ ಸಿನಿಮಾ ಫ್ಯಾನ್ಸ್‌ಗೆ ಕ್ರೇಜ್‌ ಇದೆ. ಅವರ ಮುಂಬರುವ ಚಿತ್ರಕ್ಕಾಗಿ ರಮ್ಯಾ ಫ್ಯಾನ್ಸ್‌ ಕಾಯ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್