‌Ramayana: ಶೂರ್ಪನಖಿ ಪಾತ್ರಕ್ಕೆ ಆಯ್ಕೆಯಾದ ಕನ್ನಡದ ‘ಗಿಲ್ಲಿ’ ನಟಿ

Public TV
1 Min Read

ಬಾಲಿವುಡ್‌ನಲ್ಲಿ ಸದ್ಯ ಸಂಚಲನ ಸೃಷ್ಟಿಸುತ್ತಿರುವ ಸಿನಿಮಾ ಅಂದರೆ ರಾಮಾಯಣ. ನಿತೇಶ್ ತಿವಾರಿ ಅವರು ಅಧಿಕೃತ ಘೋಷಣೆ ಮಾಡುವ ಮುನ್ನವೇ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಜಾನ್ವಿ ಕಪೂರ್ ನಟಿಸಿದ್ರೆ ಶೂರ್ಪನಖಿ ಪಾತ್ರಕ್ಕೆ ಕನ್ನಡದ ‘ಗಿಲ್ಲಿ’ (Gilli Kannada Film) ನಟಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:ವರ್ತೂರ್ ಸಂತೋಷ್ ಗೆ ಸನ್ಮಾನ ಮಾಡಿದ್ದ ಅಧಿಕಾರಿ ಎತ್ತಂಗಡಿ

ಆದಿಪುರುಷ್ ಸಿನಿಮಾ ನಂತರ ‘ರಾಮಾಯಣ’ (Ramayana) ಕಾವ್ಯ ಆಧರಿಸಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ರಾಮಾಯಣ ಸಿನಿಮಾ ದಿನಕ್ಕೊಂದು ಅಪ್‌ಡೇಟ್ ಹೊರಬೀಳುತ್ತಿದೆ. ಹೀಗಿರುವಾಗ ಬಾಲಿವುಡ್ ಬ್ಯೂಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಈಗ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ.

ರಾಮಾಯಣದಲ್ಲಿ ಇಡೀ ಕಥೆಗೆ ತಿರುವುದು ರಾವಣನ ಸಹೋದರಿ ಶೂರ್ಪನಖಿ. ಹಾಗಾಗಿ ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಚರ್ಚೆ ಈಗ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಇಡೀ ಕಥೆಯಲ್ಲಿ ಶೂರ್ಪನಖಿ ಪಾತ್ರ ಚಿಕ್ಕದು. ಆದರೆ ಆ ಪಾತ್ರಕ್ಕೆ ಬಹಳ ಮಹತ್ವ ಇದೆ. ಸದ್ಯ ಈ ಪಾತ್ರಕ್ಕಾಗಿ ರಾಕುಲ್ ಪ್ರೀತ್ ಸಿಂಗ್ ಜೊತೆ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

3 ಭಾಗಗಳಾಗಿ ‘ರಾಮಾಯಣ’ ಚಿತ್ರವನ್ನು ತೆರೆಗೆ ತರುತ್ತಾರೆ ಎನ್ನಲಾಗ್ತಿದೆ. ಮುಂದಿನ ವರ್ಷ ಪಾರ್ಟ್-1 ರಿಲೀಸ್ ಆಗುವ ನಿರೀಕ್ಷೆಯಿದೆ. ಇನ್ನು ಕೈಕೆಯಿ ಪಾತ್ರಕ್ಕೆ ಲಾರಾ ದತ್ತಾ, ವಿಭಿಷಣ ಪಾತ್ರಕ್ಕೆ ವಿಜಯ್ ಸೇತುಪತಿ ಜೊತೆ ಚರ್ಚೆ ನಡೆಸಿರುವುದಾಗಿ ಹೇಳಲಾಗಿತ್ತು. ಇದೀಗ ಶೂರ್ಪನಖಿ ಪಾತ್ರಕ್ಕಾಗಿ ಈಗಾಗಲೇ ಕನ್ನಡದ ‘ಗಿಲ್ಲಿ’ ನಟಿ ಲುಕ್ ಟೆಸ್ಟ್ ಸಹ ನಡೆದಿದೆ ಎನ್ನಲಾಗ್ತಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ಹೊರಬೀಳಲಿದೆ.

ದೆಹಲಿ ಬೆಡಗಿ ರಾಕುಲ್ ಮೊದಲು ನಟಿಸಿದ್ದು, ಕನ್ನಡದ ‘ಗಿಲ್ಲಿ’ ಸಿನಿಮಾದಲ್ಲಿ ಎಂಬುದು ವಿಶೇಷ. ಖ್ಯಾತ ನಟ ಜಗ್ಗೇಶ್ ಪುತ್ರ ಗುರುರಾಜ್‌ಗೆ ನಾಯಕಿಯಾಗಿ ರಾಕುಲ್ ಸಿನಿಮಾ ಜರ್ನಿ ಶುರು ಮಾಡಿದ್ದರು. ಇದೀಗ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿ ರಾಕುಲ್ ನೆಲೆ ಗಿಟ್ಟಿಸಿಕೊಂಡಿದ್ದಾರೆ.

Share This Article