ಇಷ್ಟು ಜನ ಸೇರ್ತಾರೆ ಅಂತಾ ಗೊತ್ತಿರ್ಲಿಲ್ಲ ಅನ್ನೋದು ಎಷ್ಟು ಸರಿ? – ಕಾಲ್ತುಳಿತ ದುರಂತಕ್ಕೆ ರಕ್ಷಿತಾ ಬೇಸರ

Public TV
1 Min Read

– ನನಗೂ ಮಗ ಇದ್ದಾನೆ, ಏನಾದ್ರೂ ಆದ್ರೆ ಹೇಗೆ ತಡ್ಕೊಳ್ಳೋಕೆ ಆಗುತ್ತೆ ಎಂದ ನಟಿ

ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ನಟಿ ರಕ್ಷಿತಾ ಪ್ರೇಮ್‌ (Rakshitha Prem) ಬೇಸರ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಸಾವು ನೆನೆದು ನಟಿ ಭಾವುಕರಾಗಿದ್ದಾರೆ.

ನಾನು ಕೂಡ ಆರ್‌ಸಿಬಿ ದೊಡ್ಡ ಫ್ಯಾನ್. ರಾತ್ರಿಯೆಲ್ಲ ಇಲ್ಲಿ ಬೈಕ್ ರ‍್ಯಾಲಿ ಮಾಡ್ತಿದ್ರು, ಸಂಭ್ರಮ ಪಡ್ತಿದ್ರು. 18ನೇ ವರ್ಷಕ್ಕೆ ಕಪ್ ಗೆದ್ದ ಸಂಭ್ರಮ ಮನೆ ಮಾಡಿತ್ತು. ಆದರೆ, ನಿನ್ನೆ ನಡೆದ ಘಟನೆ ತುಂಬಾ ನೋವು ತಂದಿದೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬೆಳಗ್ಗಿನ ಜಾವ 4 ಗಂಟೆ ವರೆಗೆ ಕೆಲಸ ಮಾಡಿದ್ದ ಪೊಲೀಸರಿಗೆ ಮತ್ತೆ ಬಂದೋಬಸ್ತ್‌ ನೀಡಲು ಆಗ್ತಿತ್ತಾ? – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ವಿಧಾನಸೌದದ ಮುಂದೆ ಸ್ಟೇಡಿಯಂ ಮುಂದೆ ಅಷ್ಟೂ ಜನ ನಿಂತಿದ್ರು. ಆರ್‌ಸಿಬಿ ಪ್ರೈವೈಟ್ ಪ್ರಾಂಚೈಸಿ, ಎರಡ್ಮೂರು ದಿನ ಕಾದು ಕಾರ್ಯಕ್ರಮಕ್ಕೆ ಟಿಕೆಟ್ ಮಾಡಿದ್ರೆ ಇಷ್ಟು ನೂಕು ನುಗ್ಗಲು ಆಗ್ತಿರಲಿಲ್ಲ. ಓಪನ್ ಇನ್ವೈಟ್ ಮಾಡಿದ್ದು ತಪ್ಪು. ಅಲ್ಲದೇ ಪೊಲೀಸರ ಮೇಲೆ ತಪ್ಪು ಹೊರೆಸೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಚಿಕ್ಕ ಮಕ್ಕಳು, ಮಹಿಳೆಯರು, ಯುವಕರಿದ್ದರು. ಯಾರು ಇದಕ್ಕೆ ಉತ್ತರ ಕೊಡ್ತಾರೆ? ಇದಕ್ಕೆ ಹೊಣೆ ಯಾರು? ಇದು ವ್ಯವಸ್ಥೆಯ ವಿಫಲತೆ. ಇಷ್ಟು ಜನ ಸೇರ್ತಾರೆ ಅಂತಾ ಗೊತ್ತಿರ್ಲಿಲ್ಲ ಅನ್ನೋದು ಎಷ್ಟು ಸರಿ? ನನಗೂ ಮಗ ಇದ್ದಾನೆ. ಏನಾದ್ರೂ ಆದ್ರೆ ಹೇಗೆ ತಡ್ಕೊಳ್ಳೋಕೆ ಆಗುತ್ತೆ ಎಂದು ದುರಂತಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Chinnaswamy Stampede Case – ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

Share This Article