ಮೈಸೂರು ಹುಡುಗನ ಬೆತ್ತಲೆ ವಿಡಿಯೋ ಇಟ್ಕೊಂಡಿದ್ದಾರಂತೆ ನಟಿ ರಾಖಿ

Public TV
2 Min Read

ಮೊನ್ನೆಯಷ್ಟೇ ಜೈಲಿನಿಂದ ಬೇಲ್ ಮೇಲೆ ಆಚೆ ಬಂದಿರುವ ನಟಿ ರಾಖಿ ಸಾವಂತ್ (Rakhi Sawant) ಪತಿ, ಮೈಸೂರು ಹುಡುಗ (Mysore) ಆದಿಲ್ (Adil) ಸ್ವತಃ ರಾಖಿ ಮೇಲೆ ಗುರುತರ ಆರೋಪವನ್ನು ಮಾಡಿದ್ದಾರೆ. ರಾಖಿಯ ಬಣ್ಣ ಬಯಲು ಮಾಡುತ್ತೇನೆ ಎಂದು ನಿನ್ನೆಯಷ್ಟೇ ಹೇಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಆದಿಲ್, ‘ರಾಖಿ ಸಾವಂತ್ ನನ್ನ ಬೆತ್ತಲೆ ವಿಡಿಯೋಗಳನ್ನು (Nude Video) ಮಾಡಿಕೊಂಡು ಇಟ್ಟುಕೊಂಡಿದ್ದಾಳೆ’ ಎಂದು ಹೇಳಿದ್ದಾರೆ.

ಯಾಕೆ ಬೆತ್ತಲೆ ವಿಡಿಯೋವನ್ನು ಮಾಡಿಕೊಳ್ಳುತ್ತೀಯಾ ಎಂದು ಕೇಳಿದ್ದೆ. ನಾವಿಬ್ಬರೂ ಬೆಸ್ಟ್ ಜೋಡಿ ಅಂತ ಹೇಳುತ್ತಿದ್ದಳು. ನಮ್ಮಿಬ್ಬರ ಬಾಂಧವ್ಯ ಇನ್ನೂ ಗಟ್ಟಿಯಾಗುತ್ತದೆ ಎಂದು ನಂಬಿಸಿದ್ದಳು. ನಾನು ಬೇಡ ಅಂದರೂ ಆಕೆ ಕೇಳಲಿಲ್ಲ ಎಂದು ಆದಿಲ್ ಹೇಳಿದ್ದಾನೆ. ರಾಖಿ ಸಾವಂತ್ ಬಗ್ಗೆ ಸಾಕಷ್ಟು ಆರೋಪಗಳನ್ನು ಆದಿಲ್ ಮಾಡಿದ್ದಾನೆ. ಆಕೆ ಗರ್ಭಿಣಿಯಾಗಿದ್ದೆ ಎಂದು ಸುಳ್ಳು ಹೇಳಿದ್ದಾಳೆ. ಆಕೆ ಆ ಶಕ್ತಿ ಇಲ್ಲವೆಂದು ಆದಿಲ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

ರಿತೇಜ್ ಜೊತೆ ಈಗಲೂ ರಾಖಿ ಸಂಪರ್ಕದಲ್ಲಿ ಇದ್ದಾಳೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ ಆದಿಲ್. ಕಳೆದ ದೀಪಾವಳಿಯಂದು ನಾನು ದುಬೈಗೆ ಹೋಗುತ್ತಿದ್ದೆ. ಆಕೆ ಲಂಡನ್ ಗೆ ಹೋಗುತ್ತಿದ್ದಳು. ಲಂಡನ್ ನಿಂದ ಮತ್ತೆ ದುಬೈಗೆ ಬಂದಳು. ಆಕೆ ಇನ್ನೂ ರಿತೇಜ್ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂದು ಗೊತ್ತಾಯಿತು. ಅವಳು ಆತನ ಜೊತೆ ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಮೆಸೇಜ್ ಕೂಡ ನೋಡಿದ್ದೇನೆ’ ಎಂದಿದ್ದಾರೆ ಆದಿಲ್.

ರಾಖಿಯನ್ನು ಹೇಗೆ ನಂಬಿದೆ ಎನ್ನುವ ಕುರಿತು ಆದಿಲ್ ಮಾತನಾಡಿದ್ದಾರೆ. ‘ಪ್ರತಿ ಸಲವೂ ಆಕೆ ರಿತೇಜ್ ನನ್ನು ಮದುವೆ ಆಗಿಲ್ಲ ಅಂತಾನೇ ಹೇಳಿದಳು. ಅಂಧೇರಿ ಕೋರ್ಟ್ ನಲ್ಲಿ ಮ್ಯಾರೇಜ್ ಮಾಡಿಕೊಳ್ಳುವಾಗಲೂ ಸಿಂಗಲ್ ಅಂತಾನೇ ಬರೆದಿದ್ದಳು. ಹಾಗಾಗಿ ನಾನು ನಂಬುತ್ತಾ ಹೋದೆ. ರಿತೇಜ್ ಮತ್ತು ಆಕೆ ಕಾನೂನು ಪ್ರಕಾರವೇ ಮದುವೆ ಆಗಿದ್ದಾರೆ. ಇನ್ನೂ ಅವರು ಡಿವೋರ್ಸ್ ಪಡೆದುಕೊಂಡಿಲ್ಲ ಎನ್ನುವುದು ಆದಿಲ್ ಮಾತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್