ವೈಷ್ಣೋ ದೇವಿ ದರ್ಶನ ಪಡೆದ ರಾಗಿಣಿ ದ್ವಿವೇದಿ

Public TV
1 Min Read

ನ್ನಡದ ನಟಿ ರಾಗಿಣಿ ದ್ವಿವೇದಿ (Ragini Dwivedi) ಜಮ್ಮು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಕುಟುಂಬದ ಜೊತೆ ದೇವರ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ವೈಷ್ಣೋ ದೇವಿ ದೇವಸ್ಥಾನಕ್ಕೆ ನಟಿ ಭೇಟಿ ನೀಡಿದ್ದಾರೆ. ಜೈ ವೈಷ್ಣೋ ಮಾ. ನಿಮ್ಮ ಮೇಲೆ ದೈವಿಕ ಶಕ್ತಿಯು ಪ್ರಜ್ವಲಿಸುತ್ತದೆ ಎಂದು ತಿಳಿದುಕೊಳ್ಳುವುದು ಅನುಭವಿಸುವುದು ಮತ್ತೊಂದು ಭಾವನೆ ಎಂದು ರಾಗಿಣಿ ತಮ್ಮ ಸೋಷಿಯಲ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸತ್ಯರಾಜ್‌, ಶರತ್‌ಕುಮಾರ್‌ ಜೊತೆ ನಮಿತಾ ಬ್ರೇಕಪ್‌ ಮಾಡಿಕೊಂಡಿದ್ದೇಕೆ?

ಕೆಂಪೇಗೌಡ ಚಿತ್ರದ (Kempegowda) ನಟಿ ರಾಗಿಣಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. 8ಕ್ಕೂ ಹೆಚ್ಚು ಸಿನಿಮಾಗಳು ರಾಗಿಣಿ ಕೈಯಲ್ಲಿವೆ.

Share This Article