‘ಜಾವಾ’ ಸಿನಿಮಾದಲ್ಲಿ ರಾಗಿಣಿ ಬೋಲ್ಡ್ ಅವತಾರ- ಪೋಸ್ಟರ್ ರಿವೀಲ್

Public TV
1 Min Read

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಇನ್ನೂ ಎರಡ್ಮೂರು ವರ್ಷ ಕಾಲ್‌ಶೀಟ್‌ಗೆ ಸಿಗಲ್ಲ, ಅಷ್ಟರಮಟ್ಟಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ‘ಜಾವಾ’ (Jawa) ಎಂಬ ಸಿನಿಮಾ ಮೂಲಕ ನಟಿ ಭಾರೀ ಸದ್ದು ಮಾಡ್ತಿದ್ದಾರೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದೆ. ಇದನ್ನೂ ಓದಿ:ನಟ ಮಡೆನೂರು ಮನು ರೇಪ್ ಕೇಸ್ – 31 ತಿಂಗಳ ವಾಟ್ಸಾಪ್ ಚಾಟ್ ಪಡೆದಿರೋ ಪೊಲೀಸರು

ಹಿರಿಯ ಡಿಂಗ್ರಿ ನಾಗಾರಾಜ್ ಪುತ್ರ ರಾಜ್ ವರ್ಧನ್‌ಗೆ (Rajavardan) ಜೊತೆಯಾಗಿ ರಾಗಿಣಿ ‘ಜಾವಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಮೇ 24ರಂದು ರಾಗಿಣಿ ಬರ್ತ್‌ಡೇ ಹಿನ್ನೆಲೆ ಅವರ ಪಾತ್ರದ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಪೋಸ್ಟರ್‌ನಲ್ಲಿ ರಾಗಿಣಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಅದಕ್ಕೆ ‘R QUEEN BRAND AMBASSADOR OF’  ದುರಹಂಕಾರ ಎಂದು ಬರೆಯಲಾಗಿದೆ.

‘ಜಾವಾ’ದಲ್ಲಿ ರಾಗಿಣಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರ ಕನ್ನಡ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ನಿರ್ಮಾಣ ಆಗುತ್ತಿದ್ದು, ದೇವಾ ಚಕ್ರವರ್ತಿ ನಿರ್ದೇಶಿಸಲಿದ್ದಾರೆ. ಜುಲೈನಲ್ಲಿ ಸಿನಿಮಾ ಶೂಟಿಂಗ್ ಶುರು ಆಗಲಿದೆ.

‘ಜಾವಾ’ ಚಿತ್ರದ ಜೊತೆ ಸಿಂಧೂರಿ, ಸರ್ಕಾರಿ ನ್ಯಾಯ ಬೆಲೆ ಅಂಗಡಿ, ಮೋಹನ್ ಲಾಲ್ ಜೊತೆ ‘ವೃಷಭ’ ಸಿನಿಮಾ ಮಾಡ್ತಿದ್ದಾರೆ ರಾಗಿಣಿ. ಈ ಚಿತ್ರಕ್ಕೆ ಕನ್ನಡದ ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡಿದ್ದಾರೆ. ಇದರೊಂದಿಗೆ ಬಾಲಿವುಡ್ ಚಿತ್ರ ಮತ್ತು ತಮಿಳಿನಲ್ಲೊಂದು ಸಿನಿಮಾ ಮುಗಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಚೌಕಿದಾರ್’ ಚಿತ್ರದ ಟೀಸರ್ ರಿಲೀಸ್- ರಕ್ತಸಿಕ್ತ ಅವತಾರದಲ್ಲಿ ಪೃಥ್ವಿ ಅಂಬರ್ ಅಬ್ಬರ

‘ಶ್ಲೋಕ್’ ಎಂಬ ಸಂಸ್ಕೃತ ಚಿತ್ರದಲ್ಲಿಯೂ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಕ್ತಿಯನ್ನು ಹೊಂದುವ ಸನ್ಯಾಸಿನಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಇದನ್ನು ಸ್ಮಶಾನದಲ್ಲಿ ಚಿತ್ರೀಕರಿಸಲಾಗಿದೆ. ಒಟ್ನಲ್ಲಿ ರಾಗಿಣಿ ಕಹಿ ಘಟನೆಯಿಂದ ಹೊರಬಂದು ಸಿನಿಮಾ ಮಾಡ್ತಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಒಂದೊಳ್ಳೆಯ ಕಾಲ ಶುರುವಾಗಿದೆ. ರಾಗಿಣಿ ಒಪ್ಪಿಕೊಂಡಿರುವ ಈ ಸಿನಿಮಾಗಳಿಂದ ಸಕ್ಸಸ್ ಸಿಗುತ್ತಾ? ಎಂದು ಕಾದುನೋಡಬೇಕಿದೆ.

Share This Article