ಭವಿಷ್ಯದಲ್ಲಿ ಕಾಸ್ಮೆಟಿಕ್‌ ಸರ್ಜರಿ ಮಾಡಿಸುತ್ತೇನೆ ಎಂದ ನಟಿ ರಾಧಿಕಾ ಮದನ್

Public TV
1 Min Read

ಚಿತ್ರರಂಗದಲ್ಲಿ ನಟ-ನಟಿಯರು ಸುಂದರವಾಗಿ ಕಾಣಲು ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗುತ್ತಾರೆ. ಇದೀಗ ಕಾಸ್ಮೆಟಿಕ್ ಸರ್ಜರಿ ಮಾಡಿಸೋದು ತಪ್ಪಲ್ಲ ಎಂದು ಬಾಲಿವುಡ್ ನಟಿ ರಾಧಿಕಾ ಮದನ್ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:4ನೇ ಬಾರಿ ಮದುವೆಗೆ ರೆಡಿಯಾದ ‘ಬಿಗ್ ಬಾಸ್’ ಖ್ಯಾತಿಯ ವನಿತಾ ವಿಜಯ್‌ಕುಮಾರ್

ಕಲಾವಿದರು ಸಹಜ ಸೌಂದರ್ಯಕ್ಕೆ ಒತ್ತು ಕೊಡಲ್ಲ. ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗುತ್ತಾರೆ ಎಂಬ ವಿಚಾರ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಈ ಕುರಿತು ಸಂದರ್ಶನವೊಂದರಲ್ಲಿ ನಟಿ ರಾಧಿಕಾ ಮಾತನಾಡಿ, ನಾನು ಕಾಸ್ಮೆಟಿಕ್ ಸರ್ಜರಿ ಮಾಡುವವರನ್ನು ದೂಷಿಸುವುದಿಲ್ಲ. ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಾನು ಈ ಬಗ್ಗೆ ಮುಂದಿನ ದಿನಗಳಲ್ಲಿ ಯೋಚಿಸುತ್ತೇನೆ. ಮುಂದೆ ಎದುರಾಗುವ ಸಂದರ್ಭದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ.

ನನ್ನ ದೃಷ್ಟಿಯಲ್ಲಿ ಕಾಸ್ಮೆಟಿಕ್ ಸರ್ಜರಿ ಮಾಡಿಸೋದು ತಪ್ಪಲ್ಲ ಎಂದು ರಾಧಿಕಾ ಮದನ್ ಮಾತನಾಡಿದ್ದಾರೆ. ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರ ಪರ ಮತ್ತು ವಿರೋಧದ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ

ಅಂದಹಾಗೆ, ಅಕ್ಷಯ್ ಕುಮಾರ್  (Akshay Kumar) ಜೊತೆ ‘ಸರ್ಫಿರಾ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ರಾಧಿಕಾ ಮದನ್ ನಟಿಸಿದ್ದರು. ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Share This Article