ಮಗಳೊಂದಿಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ರಾಧಿಕಾ ಪಂಡಿತ್

Public TV
1 Min Read

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಅವರು ಸಿನಿಮಾಗಳಲ್ಲಿ ಆಕ್ಟೀವ್ ಇಲ್ಲದೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ ಮಗಳೊಂದಿಗಿನ ನಯಾ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್ ಬಂದಿದೆ.

ಮೊಗ್ಗಿನ ಮನಸ್ಸಿನ ಬೆಡಗಿ ರಾಧಿಕಾ ಪಂಡಿತ್ ಅವರು ಕಿರುತೆರೆಯ ‘ನಂದಗೋಕುಲ’ ಸೀರಿಯಲ್‌ನಿಂದ ಸಿನಿ ಬದುಕು ಶುರು ಮಾಡಿ, ಸ್ಯಾಂಡಲ್‌ವುಡ್ ಸ್ಟಾರ್ ನಟಿಯಾಗಿ ಗೆದ್ದವರು. ಮೊಗ್ಗಿನ ಮನಸ್ಸು, ಕೃಷ್ಣ ಲವ್ ಸ್ಟೋರಿ, ಕಡ್ಡಿಪುಡಿ, ದೊಡ್ಮನೆ ಹುಡುಗ, ಎಂದೆಂದಿಗೂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಯಶ್ (Yash) ಜೊತೆಗಿನ ಕಾಂಬೋ ಸಿನಿಮಾವೆಲ್ಲಾ ಸೂಪರ್ ಹಿಟ್ ಆಗಿದೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್- ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಗುಡ್‌ ನ್ಯೂಸ್

ಬೇಡಿಕೆ ಇರುವಾಗಲೇ ಯಶ್ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟು ಮಡದಿಯಾಗಿ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಪತಿ ಯಶ್ ಯಶಸ್ಸಿನಗೆ ರಾಧಿಕಾ ಪಂಡಿತ್ ಕೊಡುಗೆ ಅಪಾರ ಎಂದೇ ಹೇಳಬಹುದು. ಸದ್ಯ ರಾಧಿಕಾ, ಮಗಳು ಐರಾ ಜೊತೆಗಿನ ಮುದ್ದಾದ ಫೋಟೋವೊಂದನ್ನ‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆನ್ನೆಯ ಮೇಲೆ ಇಬ್ಬರೂ ಕೈ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ.

ರಾಧಿಕಾ ಅವರ ಈ ಪೋಸ್ಟ್ ನೋಡ್ತಿದ್ದಂತೆ ಐರಾಳನ್ನ ಛೋಟಾ ರಾಣಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಫೋಟೋ ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಭರ್ಜರಿ ಲೈಕ್ಸ್, ಕಾಮೆಂಟ್ಸ್ ಗಿಟ್ಟಿಸಿಕೊಂಡಿದೆ.

ರಾಧಿಕಾ -ಐರಾಳ ಹೊಸ ಪೋಸ್ಟ್ಗೆ ಫ್ಯಾನ್ಸ್ ಕಾಮೆಂಟ್ ಮಾಡಿ. ಅತ್ತಿಗೆ ಯಶ್ 19 ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡಿ ಎಂದು ಗೋಗರೆದಿದ್ದಾರೆ. ಯಶ್ 19 ಸಿನಿಮಾ ಮತ್ತು ರಾಧಿಕಾ ಪಂಡಿತ್ ಕಮ್ ಬ್ಯಾಕ್ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್