5 ವರ್ಷಗಳ ಹಿಂದಿನ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್- ನಟನೆಗೆ ಕಮ್ ಬ್ಯಾಕ್?

Public TV
3 Min Read

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಅವರು ಯಶ್ (Yash) ಜೊತೆಗಿನ ದಾಂಪತ್ಯ, ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ 5 ವರ್ಷದ ಹಿಂದಿನ ಪೋಸ್ಟ್ ಹಂಚಿಕೊಂಡು, ತಾವು ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿರೋದರ ಬಗ್ಗೆ ಮೆಲುಕು ಹಾಕಿದ್ದಾರೆ. ಈ ಮೂಲಕ ಮತ್ತೆ ನಟನೆಗೆ, ಯಶ್ ಪತ್ನಿ ಕಮ್ ಬ್ಯಾಕ್ ಆಗ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಯಶ್- ರಾಧಿಕಾ ಪಂಡಿತ್ ಅವರಿಗೆ ಜುಲೈ 18 ತುಂಬಾನೇ ಸ್ಪೆಷಲ್ ದಿನ. ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ರಾಧಿಕಾ ನಾಯಕಿಯಾಗಿ ಪರಿಚಯವಾದ ದಿನ. ಚಂಚಲ ಎಂಬ ಪಾತ್ರದ ಮೊಗ್ಗಿನ ಮನಸ್ಸಿನ ಹುಡುಗಿಯಾಗಿ ರಾಧಿಕಾ ಪಂಡಿತ್ ಮಿಂಚಿದ್ದರು. ಯಶ್‌ಗೆ ಜೋಡಿಯಾಗಿ ಸಾಥ್ ನೀಡಿದ್ದರು. ನಟಿಸಿದ ಮೊದಲ ಸಿನಿಮಾನೇ ಸೂಪರ್ ಡೂಪರ್ ಹಿಟ್ ಆಗಿತ್ತು. ಆಮೇಲೆ ಆಗಿದೆಲ್ಲಾ ಇತಿಹಾಸ. ಚಂದನವನದ ಸಿಂಡ್ರೆಲಾ ಆಗಿ ನಟಿ ಸೌಂಡ್ ಮಾಡಿದ್ರು. ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬಂದು ಈಗ 15 ವರ್ಷಗಳಾಗಿದೆ.

ಜುಲೈ 18, 2008 ರಾಧಿಕಾ ಪಂಡಿತ್ (Radhika Pandit) ಆಗಿ ನಿಮಗೆಲ್ಲ ಪರಿಚಿತಳಾದೆ, ನನಗೆ ಚಿತ್ರಪ್ರಪಂಚದ ಪರಿಚಯವಾಯ್ತು. ನಟಿಯರ ಜೀವನ ಚಿಕ್ಕದು ಎನ್ನುತ್ತಾರೆ ಆದರೆ 10 ವರ್ಷ ಎಂಬುದು ಸಣ್ಣದಲ್ಲ. 10 ವರ್ಷ ಹೋರಾಡಿ ಉಳಿದದ್ದೇನೂ ಅಲ್ಲ ಬದಲಿಗೆ ಗಟ್ಟಿಯಾಗಿ ನೆಲೆಗೊಂಡಿದ್ದು. ಈ ಹತ್ತು ವರ್ಷಗಳಲ್ಲಿ ನಿನ್ನ ಸಾಧನೆ ಏನು? ಎಂದು ನೀವು ಕೇಳಬಹುದು, ನಿಮ್ಮನ್ನು (ಅಭಿಮಾನಿಗಳು) ಗಳಿಸಿರುವುದೇ ನನ್ನ ಸಾಧನೆ. ಇಂದಿಗೂ ನನ್ನನ್ನು ಪ್ರೀತಿಸುವ ಅಭಿಮಾನಿಗಳನ್ನು ಪಡೆದಿದ್ದೇನೆ. ಗೌರವಿಸುವ ಚಿತ್ರೋದ್ಯಮವನ್ನು ಪಡೆದಿದ್ದೇನೆ ಎಂದು ಐದು ವರ್ಷಗಳ ಹಿಂದಿನ ಪೋಸ್ಟ್‌ನಲ್ಲಿ ನಟಿ ರಾಧಿಕಾ ಪಂಡಿತ್ ಬರೆದಿದ್ದರು.

ಮುಂದುವರೆದು, ಈ ಪಯಣ ಸುಲಭದ್ದೇನು ಆಗಿರಲಿಲ್ಲ. ಆದರೆ ಇದನ್ನು ಸಾಧ್ಯವಾಗಿಸುವುದರಲ್ಲಿ ನನ್ನ ಸುತ್ತಲಿನವರ ಶ್ರಮ ದೊಡ್ಡದು. ಅದರಲ್ಲಿಯೂ ನನ್ನ ಕುಟುಂಬದವರ ಶ್ರಮ ದೊಡ್ಡದು. ನನ್ನ ಕುಟುಂಬದವರು ನನಗೆ ಬೆಂಬಲ ನೀಡಿದರು, ಮಾರ್ಗದರ್ಶನ ಮಾಡಿದರು. ಎಲ್ಲ ರೀತಿಯ ಋಣಾತ್ಮಕತೆಗಳಿಂದಲೂ ನನ್ನನ್ನು ಕಾಪಾಡಿದರು. ನನ್ನ ಪ್ರತಿದಿನದ ಶೂಟಿಂಗ್‌ನಲ್ಲೂ ನನ್ನ ತಾಯಿ ಜೊತೆಯಾಗಿರುತ್ತಿದ್ದರು, ಅಂತೆಯೇ ನನ್ನ ಸಹಾಯಕ ಶಂಕರ್ ಸಹ. ಶಂಕರ್ ನನ್ನ ಸಹಾಯಕನಾಗಿ ಕೆಲಸ ಆರಂಭಿಸಿ ಹತ್ತು ವರ್ಷಗಳಾಗಿವೆ ಎಂದು ತಮ್ಮ ಸಿನಿಮಾ ಪಯಣಕ್ಕೆ ಸಹಾಯ ಮಾಡಿದ ಬೆಂಬಲವಾಗಿ ನಿಂತವರಿಗೆ ಧನ್ಯವಾದಗಳನ್ನು ರಾಧಿಕಾ ಪಂಡಿತ್ ಐದು ವರ್ಷಗಳ ಹಿಂದೆ ಹೇಳಿದ್ದರು. ಇದನ್ನೂ ಓದಿ:ನಿರಾಸೆ ಮೂಡಿಸಿದ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಫಸ್ಟ್ ಲುಕ್

ತಮ್ಮ ಐದು ವರ್ಷಗಳ ಹಿಂದಿನ ಪೋಸ್ಟ್‌ನಲ್ಲಿ ಇದು ಸಿನಿಮಾ ರಂಗದ ನಿವೃತ್ತಿ ಭಾಷಣವಲ್ಲ, ಪಿಕ್ಚರ್ ಇನ್ನೂ ಇದೆ ಎಂದಿದ್ದರು. ಆ ಮೂಲಕ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವುದಾಗಿ ಸೂಚನೆ ನೀಡಿದ್ದರು. ಆದರೆ ಆ ಬಳಿಕ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿಲ್ಲ. 2019ರಲ್ಲಿ ರಿಲೀಸ್ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ.

ಕೆಲ ತಿಂಗಳುಗಳ ಹಿಂದೆ ರಾಧಿಕಾ ಪಂಡಿತ್ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡಿತ್ತು. ನಟಿ ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಲಾಗಿತ್ತು. ಪತಿ ಯಶ್, ಯಶಸ್ಸಿಗೆ ರಾಧಿಕಾ ಪಾತ್ರ ಕೂಡ ತುಂಬಾನೇ ಇದೆ. ಕೆಜಿಎಫ್‌ 2 (KGF2) ನಂತರ ಯಶ್ ಗ್ಲೋಬಲ್‌ ಸ್ಟಾರ್‌ ಆಗಿ ಮಿಂಚ್ತಿದ್ದಾರೆ. ಅವರ ಮುಂದಿನ ಸಿನಿಮಾದಲ್ಲಿ ರಾಧಿಕಾ ಕೂಡ ಸಾಥ್ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಎಲ್ಲದ್ದಕ್ಕೂ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್