ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರೆಡಿಯಾದ ರಾಧಿಕಾ ಪಂಡಿತ್

Public TV
1 Min Read

ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಸಿನಿಮಾದಿಂದ ದೂರವಿದ್ರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರಾಧಿಕಾ ರೆಡಿಯಾಗಿದ್ದಾರೆ. ಯಶ್ ಪತ್ನಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಫೆಬ್ರವರಿ ಪ್ರೇಮಿಗಳು ಆಚರಿಸುವ ತಿಂಗಳು. ಪ್ರೇಮಿಗಳ ದಿನವನ್ನು ಆಚರಿಸಲು ರಾಧಿಕಾ ರೆಡಿಯಾದಂತಿದೆ. ‘ಹಲೋ ಟು ಮಂತ್ ಆಫ್ ಲವ್’ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಫೆಬ್ರವರಿ ತಿಂಗಳನ್ನು ನಟಿ ವೆಲ್‌ಕಮ್ ಮಾಡಿದ್ದಾರೆ.

ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಕುಳಿತು ರಾಧಿಕಾ ಪಂಡಿತ್ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ರಾಧಿಕಾರ ಸ್ಟೈಲೀಶ್ ಲುಕ್, ಮುಖದಲ್ಲಿರುವ ಮಂದಹಾಸ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಸಾಯಿ ಧರಂ ತೇಜ್ ಚಿತ್ರದಿಂದ ಪೂಜಾ ಹೆಗ್ಡೆ ಔಟ್

ನಟ ಯಶ್ (Yash) ಮತ್ತು ರಾಧಿಕಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಐರಾ ಮತ್ತು ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಬಳಿಕ ರಾಧಿಕಾ ನಟನೆಯಿಂದ ದೂರ ಉಳಿದ್ದಾರೆ.

ಕೆಲ ನೆಟ್ಟಿಗರು ರಾಧಿಕಾ ಹೊಸ ಫೋಟೋಗೆ ‘ಟಾಕ್ಸಿಕ್’ (Toxic Film) ಬಗ್ಗೆ ಅಪ್‌ಡೇಟ್ ಕೊಡಿ ಎಂದು ಕಾಮೆಂಟ್ ಮಾಡುತ್ತಿದ್ರೆ, ಮತ್ತೆ ಯಾವಾಗ ನೀವು ಸಿನಿಮಾ ಮಾಡ್ತಿರಾ? ನಾವು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

Share This Article