ಫಾರಿನ್ ಟ್ರಿಪ್ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

Public TV
1 Min Read

ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಮತ್ತೆ ಸುದ್ದಿಯಲ್ಲಿದ್ದಾರೆ. ಮಾರ್ಚ್‌ ಮೊದಲ ವಾರದಲ್ಲಿ ರಾಧಿಕಾ-ಯಶ್ (Yash) ಕುಟುಂಬ ವಿದೇಶಕ್ಕೆ ಹಾರಿದ್ದರು. ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಕಲರ್‌ಫುಲ್ ಆಗಿ ಆಚರಣೆ ಮಾಡಿದ್ದರು. ಇದೀಗ ಫಾರಿನ್ ಟ್ರಿಪ್ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ.

`ಮೊಗ್ಗಿನ ಮನಸ್ಸು’ (Moggina Manasu) ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಧಿಕಾ, ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದರು. ಬೇಡಿಕೆ ಇರುವಾಗಲೇ ಯಶ್ ಜೊತೆ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಈಗ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಸಂಸಾರಿಕ ಜೀವನದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

ಮಾರ್ಚ್ 7ರಂದು ರಾಧಿಕಾ ಪಂಡಿತ್ ಹುಟ್ಟುಹಬ್ಬ ಹಾಗಾಗಿ ಫ್ಯಾಮಿಲಿ ಜೊತೆ ರಾಧಿಕಾ-ಯಶ್ ಜೋಡಿ ವಿದೇಶಕ್ಕೆ ವೇಕೆಷನ್ ಹೋಗಿದ್ದರು. ಅಂದು ವಿದೇಶದಲ್ಲಿ ಕ್ಲಿಕ್ಕಿಸಿದ ಚೆಂದದ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಫೋನ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ಫೋಟೋಸ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

 

View this post on Instagram

 

A post shared by Radhika Pandit (@iamradhikapandit)

ರಾಧಿಕಾ ಪಂಡಿತ್ ಅವರು ಮಹಿಳಾ ಪ್ರಧಾನ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಅವರಿಗೂ ಸಿನಿಮಾಗೆ ಮತ್ತೆ ಎಂಟ್ರಿ ಕೊಡುವ ಆಸಕ್ತಿಯಿದೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ.

Share This Article